ರೌಡಿಶೀಟರ್ ರವಿ ಬೆಂಗಳೂರಿಗೆ ಬಂದಿದ್ದೇ ರೋಚಕ ಕಹಾನಿ

0

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಎಂಬಾತನ ವಿಚಾರದಲ್ಲಿ ರಾಡಿ ಎದ್ದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಫೋಟೋ, ವಿಡಿಯೋ ಸಮರ ಶುರುವಾಗಿದೆ. ಮೈಸೂರಿನಲ್ಲಿ ಓಡಾಡಿಕೊಂಡಿದ್ದ ಈ ರೌಡಿಶೀಟರ್ ರವಿ ಬೆಂಗಳೂರಿಗೆ ಬಂದಿದ್ದೇ ಒಂದು ರೋಚಕ ಕಹಾನಿ.

ಯಾರುಸ್ಯಾಂಟ್ರೋರವಿ?
ಸ್ಯಾಂಟ್ರೋ ರವಿಯ ಮೂಲ ಹೆಸರು ಮಂಜುನಾಥ್. ಮಂಡ್ಯ ಮೂಲದ ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೋ ರವಿ ಸಂಪ್ರದಾಯಬದ್ಧ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ. ರವಿ ತಂದೆ ಅಬಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ದರು. ತಂದೆಯ ಮರಣದ ನಂತರ ಮಂಜುನಾಥ್ ಅಡ್ಡದಾರಿ ಹಿಡಿದಿದ್ದ. ಹೆತ್ತ ತಾಯಿ ಹಾಗೂ ಸಹೋದರರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದ ಈತ ಪುಡಿರೌಡಿಗಳ ಜೊತೆ ಸೇರಿ ಅಸಭ್ಯ ವರ್ತನೆ ಎಸಗುತ್ತಿದ್ದ .2000 ಇಸವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ ರವಿ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ.

ಮೈಸೂರಿನಲ್ಲಿಏನುಮಾಡುತ್ತಿದ್ದ?
ಮೈಸೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ.

ಕುಮಾರಕೃಪಾದಲ್ಲಿವಾಸ:
ಮೈಸೂರಿನ ಗಲ್ಲಿ ಗಲ್ಲಿ ಅಲೆಯುತ್ತಿದ್ದ ಸ್ಯಾಂಟ್ರೋ ರವಿ ಬೆಂಗಳೂರಿಗೆ ಬಂದ ಬಳಿಕ ರಾಜಕಾರಣಿಗಳ ಸ್ನೇಹ ಬೆಳೆಸಿದ. ತನ್ನ ಪಿಂಪ್ ವ್ಯವಹಾರಕ್ಕೆ ರಾಜಕಾರಣಿಗಳ ಶ್ರೀರಕ್ಷೆ, ಕೃಪಾಕಟಾಕ್ಷ ಪಡೆದುಕೊಂಡ. ಪಿಂಪ್ ಕೆಲಸ ಗೊತ್ತಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಅತಿಥಿ ಗೃಹವನ್ನೇ ಕುಮಾರ ಕೃಪಾ ಗೆಸ್ಟ್ ಹೌಸ್ ಅನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ.

ಗೆಸ್ಟ್‌ ಹೌಸ್‌ನಲ್ಲೇ ರಾಜಕಾರಣಿಗಳು ಮತ್ತು ಅಧಿಕಾರಿಗಳ ಭೇಟಿ ಮಾಡುತ್ತಿದ್ದ ರವಿ ಖಾಯಂ ಆಗಿ ಅಲ್ಲಿಯೇ ನೆಲೆಸಿದ್ದ. ಇದರಿಂದಾಗಿ ಆತನಿಗೆ ತನ್ನ ವ್ಯವಹಾರ ನಡೆಸುವುದಕ್ಕೆ ಸುಲಭ ಆಗಿತ್ತು. ಈತನ ದಂಧೆ ಬಗ್ಗೆ ಯಾರಿಗೂ ಅನುಮಾನವೇ ಬರುತ್ತಿರಲಿಲ್ಲ. ವರ್ಗಾವಣೆ ದಂಧೆಯನ್ನು ಕೂಡ ತುಂಬಾ ಚೆನ್ನಾಗಿ ನಡೆಸಬಹುದಾಗಿತ್ತು. ಅದಕ್ಕಾಗಿಯೇ ಕುಮಾರಕೃಪಾ ಗೆಸ್ಟ್‌ ಹೌಸ್‌ ಖಾಯಂ ಜಾಗವಾಗಿ ಹೋಗಿತ್ತು.

About Author

Leave a Reply

Your email address will not be published. Required fields are marked *

You may have missed