ಪೋಸ್ಟ್ ಆಫೀಸ್’ನ ಈ ಸ್ಕೀಮ್’ನಲ್ಲಿ ಹೂಡಿಕೆ ಮಾಡಿ ಪಡೆಯಿರಿ 63.65 ಲಕ್ಷ

0

ರ್ಕಾರ ಹೆಣ್ಣು ಮಕ್ಕಳ ಸಬಲೀಕರಣ ಉದ್ದೇಶದಿಂದ ದೇಶದಲ್ಲಿ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ. ಹೆಣ್ಣು ಮಗಳ ಭವಿಷ್ಯದ ಉದ್ದೇಶದಿಂದ ಹಣವನ್ನ ಹೂಡಿಕೆ ಮಾಡುವ ಪೋಷಕರಿಗೆ ಇಲ್ಲೊಂದು ಉತ್ತಮವಾದ ಯೋಜನೆ ಇದೆ ಮತ್ತು ಈ ಯೋಜನೆಯ ಡಿಯಲ್ಲಿ ಹೂಡಿಕೆಯನ್ನ ಮಾಡಿದರೆ ಹೆಣ್ಣುಮಗು ವಯಸ್ಸಿಗೆ ಬಂದ ಸಮಯದಲ್ಲಿ ಬರೋಬ್ಬರಿ 63.65 ಲಕ್ಷ ರೂಪಾಯಿ ಹಣ ಸಿಗುತ್ತದೆ.

ಹೌದು Post Office Scheme ನಲ್ಲಿ ಹೂಡಿಕೆ ಮಾಡುವುದರ ಮೂಲಕ ಪೋಷಕರು ಹೆಚ್ಚಿನ ಲಾಭವನ್ನ ಪಡೆದುಕೊಳ್ಳಬಹುದು.

ಹೌದು ಪೋಸ್ಟ್ ಆಫೀಸ್ ನಲ್ಲಿ Sukanya Samruddhi Scheme ಅಡಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಣ್ಣು ಮಗು ವಯಸ್ಸಿಗೆ ಬಂದ ಸಮಯದಲ್ಲಿ ಆಕೆಯ ಮದುವೆ ಮತ್ತು ವಿದ್ಯಾಭ್ಯಾಸಕ್ಕೆ ದೊಡ್ಡ ಮಟ್ಟದ ಹಣದ ಲಾಭವನ್ನ ಪಡೆದುಕೊಳ್ಳಬಹುದು. ಹೆಣ್ಣು ಮಕ್ಕಳ ಭವಿಷ್ಯವನ್ನ ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದ್ದು ಅದೆಷ್ಟೋ ಪೋಷಕರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿದಿಲ್ಲ.

ಪೋಷಕರು ಅಂಚೆ ಕಚೇರಿಯಲ್ಲಿ 250 ರೂಪಾಯಿ ಹೂಡಿಕೆ ಮಾಡುವುದರ ಮೂಲಕ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯನ್ನ ಆರಂಭಿಸಬಹುದು. ಮನೆಯ ಹೆಣ್ಣು ಮಗುವಿಗೆ ಹತ್ತು ವರ್ಷ ಪೂರೈಸಿದ ನಂತರ ಈ ಯೋಜನೆಯನ್ನ ಆರಂಭ ಮಾಡಬಹುದು ಮತ್ತು ಈ ಯೋಜನೆಯ ಹೂಡಿಕೆಯ ಕನಿಷ್ಠ ಮೊತ್ತ 250 ರೂಪಾಯಿ ಮತ್ತು ಗರಿಷ್ಟ ಹೂಡಿಕೆಯ ಮೊತ್ತ 1.50 ಲಕ್ಷ ರೂಪಾಯಿ ಆಗಿದೆ.

ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಅಂಚೆ ಕಚೇರಿ ನೀವು ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕವಾಗಿ ಶೇಕಡಾ 7.6 ಬಡ್ಡಿಯನ್ನ ನೀಡುತ್ತದೆ. ಅದೇ ರೀತಿಯಲ್ಲಿ ನೀವು ಈ Sukanya Samruddhi Scheme ಅಡಿಯಲ್ಲಿ ವಾರ್ಷಿಕವಾಗಿ 1.50 ಲಕ್ಷ ರೂಪಾಯಿ ಠೇವಣಿ ಇಡಲು ಬಯಸಿದರೆ ನೀವು ಪ್ರತಿ ತಿಂಗಳು 12500 ರೂಪಾಯಿಯನ್ನ ಹೂಡಿಕೆ ಮಾಡಬೇಕು.

ಈ ಯೋಜನೆಯ ಮುಕ್ತಾಯದ ಅವಧಿ 14 ವರ್ಷಗಳು ಆಗಿದೆ ಮತ್ತು 14 ವರ್ಷಗಳ ಕಾಲ ಪ್ರತಿ ತಿಂಗಳು ಹಣವನ್ನ ಹೂಡಿಕೆ ಮಾಡಬೇಕು. 14 ವರ್ಷಗಳ ಕಾಲ ಹಣವನ್ನ ಹೂಡಿಕೆ ಮಾಡಿದ ನಂತರ ನೀವು ಹೂಡಿಕೆ ಮಾಡಿದ ಒಟ್ಟು ಹಣ 22.50 ಲಕ್ಷ ರೂಪಾಯಿ ಆಗುತ್ತದೆ.

ಇನ್ನು ಈ ಹಣಕ್ಕೆ ಪ್ರತಿಯಾಗಿ ನೀವು 14 ವರ್ಷಗಳ ನಂತರ 63.65 ಲಕ್ಷ ರೂಪಾಯಿ ಪಡೆಯುತ್ತೀರಿ ಮತ್ತು 14 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣಕ್ಕೆ ಲಾಭವಾಗಿ ಬರೋಬ್ಬರಿ 41.15 ಲಕ್ಷ ಪಡೆಯುತ್ತೀರಿ. ಇದೊಂದು ಲಾಂಗ್ ಟರ್ಮ್ ಉಳಿತಾಯ ಯೋಜನೆ ಆಗಿದ್ದು ಆರಂಭದಲ್ಲಿ ಹೂಡಿಕೆ ಮಾಡಲು ಕಷ್ಟವಾದರೂ ಕೂಡ ಮುಂದೊಂದು ದಿನ ದೊಡ್ಡ ಮೊತ್ತದ ಲಾಭವನ್ನ ಪಡೆದುಕೊಳ್ಳಬಹುದು.

About Author

Leave a Reply

Your email address will not be published. Required fields are marked *

You may have missed