ಪನ್ನೀರ್ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ..?

0

ನೀರ್ ಒಂದು ಡೈರಿ ಉತ್ಪನ್ನ, ಶುದ್ಧ ಹಾಲಿನಿಂದ ತಯಾರು ಮಾಡಲಾಗುವ ಪನೀರ್ ನಿಮ್ಮ ಹಲವಾರು ಅಡುಗೆಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಕೇವಲ ತಯಾರು ಮಾಡಿದ ಆಹಾರ ಪದಾರ್ಥದ ಸ್ವಾದ ಹೆಚ್ಚಾಗುವುದು ಮಾತ್ರವಲ್ಲದೆ, ನಿಮ್ಮ ದೇಹಕ್ಕೆ ಸಿಗುವ ಆರೋಗ್ಯ ಪ್ರಯೋಜನಗಳು ಕೂಡ ಹೆಚ್ಚಾಗಲಿವೆ.

ಪನೀರ್ ಸೇವನೆಯ ಬಗ್ಗೆ ಇನ್ನೂ ಸಹ ಸರಿಯಾದ ಮಾಹಿತಿ ಇಲ್ಲದೆ ಇರುವವರಿಗೆ ಅಥವಾ ಪನೀರ್ ಏಕೆ ಸೇವನೆ ಮಾಡಬೇಕು ಎಂದು ಕೇಳುವವರಿಗೆ ಈ ಲೇಖನದಲ್ಲಿ ಸರಿಯಾದ ಮಾಹಿತಿ ಇದೆ.

ಅತ್ಯುತ್ತಮ ಪ್ರಮಾಣದ ಪ್ರೋಟೀನ್ ಅಂಶ ಸಿಗಲಿದೆ

  • ಮಾಂಸಾಹಾರಿಗಳಿಗೆ ಬಗೆಬಗೆಯ ಮಾಂಸಗಳಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರೊಟೀನ್ ಅಂಶ ಸುಲಭವಾಗಿ ಸಿಗುತ್ತದೆ. ಹಾಗಾಗಿ ಅವರಿಗೆ ಪ್ರೋಟೀನ್ ಅಂಶದ ಕೊರತೆ ಎಂದಿಗೂ ಕಾಡುವುದಿಲ್ಲ.
  • ಆದರೆ ಸಸ್ಯಹಾರಿಗಳಿಗೆ ಹಾಗಲ್ಲ. ಕೇವಲ ಕೆಲವೇ ಕೆಲವು ಸಸ್ಯಾಹಾರ ಪದಾರ್ಥಗಳಲ್ಲಿ ಮಾತ್ರ ಪ್ರೋಟೀನ್ ಅಂಶ ಸಿಗುತ್ತದೆ. ಇದರಲ್ಲಿ ಪನೀರ್ ಕೂಡ ಒಂದು.
  • ಮೊದಲೇ ಡೈರಿ ಉತ್ಪನ್ನವಾಗಿರುವುದರಿಂದ, ಇದರಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಅಂಶ ಲಭ್ಯವಾಗುತ್ತದೆ. ಆರೋಗ್ಯ ತಜ್ಞರ ಅಂದಾಜಿನ ಪ್ರಕಾರ ಸುಮಾರು 100 ಗ್ರಾಂ ಪನ್ನೀರ್ ನಲ್ಲಿ ಬರೋಬ್ಬರಿ 18 ಗ್ರಾಂ ಪ್ರೊಟೀನ್ ಅಂಶ ತುಂಬಿದೆ. ಇದು ಮಾಂಸಖಂಡಗಳ ರಿಪೇರಿ ಮತ್ತು ಅಭಿವೃದ್ಧಿಯಲ್ಲಿ ನೆರವಾಗುತ್ತದೆ.

ನಿಮ್ಮ ಹೊಟ್ಟೆ ಹಸಿವನ್ನು ದೂರಮಾಡುತ್ತದೆ

ಮೊದಲೇ ಹೇಳಿದಂತೆ ಪನೀರ್ ನಲ್ಲಿ ಪ್ರೋಟೀನ್ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ಇದು ನಿಮ್ಮ ದೇಹದಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚು ಮಾಡಬಲ್ಲದು. ಇದರ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ಎಂದಿಗೂ ಹೆಚ್ಚು ಮಾಡುವುದಿಲ್ಲ ಅಥವಾ ಇದ್ದಕ್ಕಿದ್ದಂತೆ ಕಡಿಮೆ ಕೂಡ ಮಾಡುವುದಿಲ್ಲ. ಹಾಗಾಗಿ ನಿಮ್ಮ ಹೊಟ್ಟೆ ಹಸಿವು ಸುಲಭವಾಗಿ ಇದರಿಂದ ನಿಯಂತ್ರಣ ಆಗಬಲ್ಲದು ಎಂದು ಹೇಳಬಹುದು.

ಗಟ್ಟಿಮುಟ್ಟಾದ ಹಲ್ಲುಗಳು ನಿಮ್ಮದಾಗುತ್ತವೆ

  • ಪನೀರ್ ನಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ನಿಮ್ಮ ಹಲ್ಲುಗಳು ಅಥವಾ ಮೂಳೆಗಳಿಗೆ ಉತ್ತಮ ಸದೃಢತೆಯನ್ನು ಇದು ನೀಡಬಲ್ಲದು.
  • ಹಾಲಿನ ಉತ್ಪನ್ನ ಆಗಿರುವುದರಿಂದ ಇದರಲ್ಲಿ ಹಾಲಿಗಿಂತಲೂ ಅಧಿಕವಾದ ವಿವಿಧ ಬಗೆಯ ಪೌಷ್ಟಿಕ ಸತ್ವಗಳು ಅಡಗಿವೆ. ಅತಿಯಾದ ಕ್ಯಾಲೋರಿಗಳು ನಿಮ್ಮ ದೇಹಕ್ಕೆ ಸೇರುತ್ತದೆ ಎನ್ನುವುದನ್ನು ಬಿಟ್ಟರೆ ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಎಂದು ಹೇಳಬಹುದು.

ದೇಹದಲ್ಲಿ ಕೊಬ್ಬಿನ ಅಂಶ ಕರಗಲು ಸಹಾಯ ಮಾಡುತ್ತದೆ

  • ಪ್ರೋಟೀನ್ ಕ್ಯಾಲ್ಸಿಯಂ ಅಂಶದಲ್ಲಿ ಬೇರೆ ಆಹಾರ ಪದಾರ್ಥಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಪನೀರ್ ತನ್ನಲ್ಲಿ ಲಿನೊಲಿಕ್ ಆಮ್ಲವನ್ನು ಪಡೆದಿದೆ.
  • ಇದು ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡುವ ಜೊತೆಗೆ ತನ್ನ ಆಮ್ಲೀಯ ಪ್ರಮಾಣದಿಂದ ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಕೆಟ್ಟ ಕೊಬ್ಬಿನ ಅಂಶವನ್ನು ಕರಗಿಸುತ್ತದೆ ಮತ್ತು ದೇಹದ ತೂಕದ ಮೇಲೆ ನಿಯಂತ್ರಣ ಉಂಟುಮಾಡುತ್ತದೆ.
  • ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಹೊಂದಬೇಕು ಎಂದು ಆಲೋಚನೆ ಮಾಡುತ್ತಿರುವವರಿಗೆ ಇದೊಂದು ಸೂಕ್ತವಾದ ಆಹಾರ ಪದಾರ್ಥ ಎಂದು ಹೇಳಬಹುದು.

ಮಾರಕ ಕಾಯಿಲೆಗಳಿಗೆ ತಡೆ ಹಾಕುತ್ತದೆ

  • ಈಗಿನ ಹಲವಾರು ಮಾರಕ ಕಾಯಿಲೆಗಳು ಎನ್ನಲಾದ ಕ್ಯಾನ್ಸರ್, ಲುಕೇಮಿಯಾ, ಹೃದಯದ ಸಮಸ್ಯೆ ಇತ್ಯಾದಿಗಳಿಗೆ ರಾಮಬಾಣವಾಗಿ ಪನೀರ್ ಕೆಲಸ ಮಾಡಲಿದ್ದು, ದೇಹದಲ್ಲಿ ಕೆಟ್ಟ ಜೀವಕೋಶಗಳು ಬೆಳವಣಿಗೆ ಆಗದಂತೆ ನೋಡಿಕೊಳ್ಳುತ್ತದೆ
  • ಜೊತೆಗೆ ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಶೇಖರಣೆಯಾಗಿ ಹೃದಯದ ಕಾರ್ಯ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ.

ಗಮನಿಸಬೇಕಾದ ಅಗತ್ಯ ವಿಚಾರ

  • ಪನೀರ್ ನಲ್ಲಿ ನಿಮಗೆ ಮೇಲಿನ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತವೆ ನಿಜ. ಆದರೆ ಮೊದಲೇ ಹೇಳಿದಂತೆ ಇದರಲ್ಲಿ ಕ್ಯಾಲೊರಿ ಅಂಶಗಳ ಪ್ರಮಾಣ ಕೂಡ ಅಷ್ಟೇ ಹೆಚ್ಚಾಗಿ ಕಂಡುಬರುತ್ತದೆ.
  • ಆರೋಗ್ಯ ತಜ್ಞರ ಪ್ರಕಾರ ಕೇವಲ 100 ಗ್ರಾಂ ಪನೀರ್ ನಲ್ಲಿ 290 ಕ್ಕೂ ಹೆಚ್ಚು ಕ್ಯಾಲೋರಿಗಳು ಸಿಗಲಿವೆ. ಹೀಗಾಗಿ ಈಗಾಗಲೇ ದಪ್ಪ ಇರುವವರು ಇದರ ಸೇವನೆಯಿಂದ ದೂರವುಳಿದರೆ ಒಳ್ಳೆಯದು. ಸೇವನೆ ಮಾಡುವವರು ಕೂಡ ಮಿತಿ ಕಾಯ್ದುಕೊಂಡರೆ ಒಳ್ಳೆಯದು.
  • ಹಸಿಯಾಗಿ ಕೂಡ ಪನೀರ್ ತಿನ್ನಬಹುದು ಇಲ್ಲವೆಂದರೆ ಇದರ ಮೇಲ್ಭಾಗದಲ್ಲಿ ಪುಡಿ ಉಪ್ಪು ಮತ್ತು ಕಪ್ಪು ಕಾಳುಮೆಣಸಿನ ಪುಡಿಯನ್ನು ಸಿಂಪಡಿಸಿ ಸೇವನೆ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ಇದನ್ನು ಎಣ್ಣೆಯಲ್ಲಿ ಕರಿದು ತಿನ್ನಬೇಡಿ.

About Author

Leave a Reply

Your email address will not be published. Required fields are marked *

You may have missed