ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಿತ್ತಳೆ ಹಣ್ಣು ಉತ್ತಮ..!

0

SONY DSC

ಕಿತ್ತಳೆ ಹಣ್ಣು ಎಷ್ಟು ರುಚಿಕರವೋ, ಹಾಗೇಯೆ ಅದು ಆರೋಗ್ಯದ ದೃಷ್ಟಿಯಿಂದ ಅಷ್ಚೇ ಉಪಯುಕ್ತವಾದದ್ದು ಕೂಡ. ಮತ್ತೇಕೆ ತಡ, ಕಿತ್ತಳೆಯನ್ನು ಇಂದೇ ಹೋಗಿ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ ಲಾಭ ಪಡೆಯಿರಿ.ಈ ಹಣ್ಣು ಕ್ರೀಡಾಪಟುಗಳಿಗೆ ಪ್ರಮುಖ ಆಹಾರವಾಗಿದೆ. ಇದರಲ್ಲಿ ವಿಟಮಿನ್​ ಸಿ ಇರುವುದರಿಂದ ಕ್ರೀಡಾಪಟುಗಳಿಗೆ ಬಹಳ ಉಪಯೋಗವಾಗಿದೆ..
ವಿಟಮಿನ್ಸಿಉತ್ತಮಮೂಲ: ವಿಟಮಿನ್ ಸಿ ಕಿತ್ತಳೆಯಲ್ಲಿ 70 ಪ್ರತಿಶತದವರೆಗೆ ಇರುತ್ತದೆ. ಒಂದು ಕಿತ್ತಳೆ ಇಡೀ ದಿನ ನಮ್ಮ ದೇಹಕ್ಕೆ ವಿಟಮಿನ್ ಸಿ ಪೂರೈಸುತ್ತದೆ. ವಿಟಮಿನ್-ಸಿ ದೇಹದಲ್ಲಿ ಕಬ್ಬಿಣವನ್ನು ಸಂಗ್ರಹಿಸಲು, ಉತ್ತಮ ರೋಗನಿರೋಧಕ ಶಕ್ತಿಗೆ ಅವಶ್ಯಕವಾಗಿದೆ.
ಕರುಳಿನಆರೋಗ್ಯಕ್ಕೆಒಳ್ಳೆಯದು: ಕಿತ್ತಳೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಿ ಕರುಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ನಮ್ಮ ದೇಹವು ಸರಿಯಾದ ಪ್ರಮಾಣದ ಫೈಬರ್ ಅನ್ನು ಪಡೆದರೆ, ಅದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಇದಲ್ಲದೆ, ಕಿತ್ತಳೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಗರ್ಭಿಣಿಯರಿಗೆರಾಮಬಾಣ: ನಮ್ಮ ದೇಹವು ಡಿಎನ್‌ಎ ಮತ್ತು ಇತರ ಆನುವಂಶಿಕ ವಸ್ತುಗಳನ್ನು ತಯಾರಿಸಲು ಕೆಲಸ ಮಾಡುತ್ತದೆ. ಇದಕ್ಕೆ ಬಿ ವಿಟಮಿನ್ ಫೋಲೇಟ್ ಅಗತ್ಯವಿದೆ. ಇದೇ ಕಾರಣಕ್ಕೆ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಕಿತ್ತಳೆ ಹಣ್ಣು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಮಕ್ಕಳ ಮೆದುಳು ಸರಿಯಾಗಿ ಬೆಳೆಯುತ್ತದೆ.
ಔಷಧಕ್ಕಿಂತಹೆಚ್ಚು: ಒಂದು ಕಿತ್ತಳೆ ಹಣ್ಣಿನಲ್ಲಿ 170ಕ್ಕೂ ಹೆಚ್ಚು ಫೈಟೊಕೆಮಿಕಲ್‌ಗಳು, 60 ಫ್ಲೇವನಾಯ್ಡ್‌ಗಳಿವೆ. ಇವುಗಳು ಇತರ ಯಾವುದೇ ಉತ್ಕರ್ಷಣ ನಿರೋಧಕ ಆಹಾರ ಅಥವಾ ಔಷಧಿಗಳಿಗಿಂತ ಹೆಚ್ಚು. ಕಿತ್ತಳೆ ಕ್ಯಾನ್ಸರ್, ಸಂಧಿವಾತ, ಮಧುಮೇಹ ಮತ್ತು ಆಲ್ಝೈಮರ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ.ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಬಹುದು.
ಕಿತ್ತಳೆ ಹಣ್ಣಿನಲ್ಲಿರುವ ಡಿ – ಲಿಮೋನೆನ್ ಎಂಬ ಸಂಯುಕ್ತ ಶ್ವಾಸಕೋಶದ ಅಂಶವು ನಿಮ್ಮನ್ನು ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದ ವಿವಿಧ ರೀತಿಯ ಕ್ಯಾನ್ಸರ್ ಕಯಿಲೆಗಳನ್ನು ತಡೆಯುತ್ತದೆ. ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುವುದಲ್ಲದೆ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.ಕಿತ್ತಳೆ ನಾರಿನ ಘನ ಮೂಲವಾಗಿದೆ. ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. . ಇದರಿಂದ್ದ ಹಸಿವು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದು ಕ್ಯಾಲರಿಗಳನ್ನು ಕಡಿತಗೊಳಿಸಲು ಮತ್ತು ತೂಕ ಇಳಿಸಿಕೊಳ್ಳಲು ಬಯಸುವ ಜನರಿಗೆ ಉತ್ತಮ ಪ್ರಯೋಜನವಾಗಿದೆ.

About Author

Leave a Reply

Your email address will not be published. Required fields are marked *

You may have missed