ಆಧಾರ್ ಕಾರ್ಡ್ ಅಪ್​ಡೇಟ್ ದಿನಾಂಕ ವಿಸ್ತರಣೆ

0

ಧಾರ್ ಕಾರ್ಡ್ ನಲ್ಲಿ ನಮ್ಮ ದಾಖಲೆಗಳನ್ನು ಉಚಿತವಾಗಿ ತಿದ್ದುಪಡಿ ಮಾಡಲು ಜೂನ್ 14ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಇದನ್ನು 3 ತಿಂಗಳು ಹೆಚ್ಚಿಸಲಾಗಿದೆ. 2023 ಸೆಪ್ಟಂಬರ್ 14ರವರೆಗೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ಅವಕಾಶ ಇದೆ.

ಬಹಳ ಜನರ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಿಂದಿನದ್ದಾದರೂ ಒಮ್ಮೆಯೂ ಅಪ್​ಡೇಟ್ ಮಾಡಿಲ್ಲ. ಈ ರೀತಿ 10 ವರ್ಷದಿಂದ ಯಥಾಸ್ಥಿತಿಯಲ್ಲಿ ಇರುವ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಬೇಕು ಎಂದು ಸರ್ಕಾರ ಆಗಾಗ್ಗೆ ಮನವಿ ಮಾಡುತ್ತಿದೆ. ಆಧಾರ್ ಸೆಂಟರ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ನೀವು ಅಪ್​ಡೇಟ್ ಮಾಡಬಹುದು. ಇದಕ್ಕೆ ನಿರ್ದಿಷ್ಟ ಶುಲ್ಕ ಇರುತ್ತದೆ. ಇದರ ಜೊತೆಗೆ, ಆನ್​ಲೈನ್​ನಲ್ಲಿ ನೀವೇ ಸ್ವತಃ ಅಪ್ಡೇಶನ್ ಮಾಡಲು ಸಾಧ್ಯ. ಆನ್​ಲೈನ್​ನಲ್ಲಿ ಸದ್ಯ ಉಚಿತವಾಗಿ ಈ ಸೇವೆ ಲಭ್ಯ ಇದೆ. ಸೆಪ್ಟಂಬರ್ 14ರ ಬಳಿಕ ಆನ್​ಲೈನ್​ನಲ್ಲೂ ಶುಲ್ಕ ಪಾವತಿಸಿ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.

ಡೆಮೋಗ್ರಾಫಿಕ್ ಮಾಹಿತಿಯ ನಿಖರತೆ ಕಾಪಾಡಲು ದಯವಿಟ್ಟು ಆಧಾರ್ ಅಪ್​ಡೇಟ್ ಮಾಡಿ ಎಂದು ಯುಐಡಿಎಐ ಕರೆ ನೀಡಿದೆ. ಯುಐಡಿಎಐನ ಮೈ ಆಧಾರ್ ಪೋರ್ಟಲ್ ಮೂಲಕ ಸುಲಭವಾಗಿ ನಿಮ್ಮ ಆಧಾರ್ ಅಪ್​ಡೇಟ್ ಸಾಧ್ಯವಾಗುತ್ತದೆ. ಇಲ್ಲಿ ನಿಮಗೆ ಗೊಂದಲ ಅಥವಾ ಕಷ್ಟ ಎನಿಸಿದರೆ ಆಧಾರ್ ಸೆಂಟರ್​ಗೆ ಹೋಗಿ 25 ರೂ ಶುಲ್ಕ ನೀಡಿ ಈ ಕಾರ್ಯ ಮಾಡಿಸಬಹುದು.

ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಶನ್ ಹೇಗೆ ಮಾಡುವುದು?

  • ಆಧಾರ್​ನ ಅಧಿಕೃತ ಪೋರ್ಟಲ್ ಮೈ ಆಧಾರ್​ಗೆ ಹೋಗಿ
  • ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ನೆರವಿನಿಂದ ಲಾಗಿನ್ ಆಗಿ.
  • ಹೆಸರು, ಲಿಂಗ, ಜನ್ಮದಿನಾಂಕ, ವಿಳಾಸ ಅಪ್​ಡೇಟ್ ಮಾಡಿ
  • ಅಪ್​ಡೇಟ್ ಆಧಾರ್ ಆನ್​ಲೈನ್ ಎಂಬ ಆಪ್ಷನ್ ಆಯ್ದುಕೊಳ್ಳಿ
  • ಅಲ್ಲಿ ಕೊಟ್ಟಿರುವ ಸೂಚನೆಗಳ ಪ್ರಕಾರ ಕ್ರಮ ಕೈಗೊಂಡು, ನಿಮ್ಮ ದಾಖಲೆಗಳನ್ನು ಅಪ್​ಲೋಡ್ ಮಾಡಿ
  • ಈಗ ಸರ್ವಿಸ್ ರಿಕ್ವೆಸ್ಟ್ ನಂಬರ್(ಎಸ್​ಆರ್​ಎನ್) ಜನರೇಟ್ ಆಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಂಡಿರಿ.

ಆಧಾರ್ ವಿಚಾರದಲ್ಲಿ ಹೆಲ್ಪ್​ಲೈನ್ ನಂಬರ್

ಆಧಾರ್ ಅಪ್​ಡೇಶನ್ ಪೂರ್ಣಗೊಂಡಿದೆಯಾ ಎಂಬುದನ್ನು ತಿಳಿದುಕೊಳ್ಳಲು ಯುಐಡಿಎಐನ 1947 ನಂಬರ್​ಗೆ ಕರೆ ಮಾಡಬಹುದು. ಇದು ಟಾಲ್​ಫ್ರೀ ಆಗಿದ್ದು, ಐವಿಆರ್​ಎಸ್ ಸಿಸ್ಟಂ ಆಗಿದೆ. ಆಧಾರ್ ಸ್ಟೇಟಸ್ ಮಾತ್ರವಲ್ಲ, ಆಧಾರ್ ಎನ್ರೋಲ್​ಮೆಂಟ್, ಪಿವಿಸಿ ಕಾರ್ಡ್ ಸ್ಟೇಟಸ್ ಅನ್ನೂ ಇಲ್ಲಿ ಪಡೆಯಬಹುದು. ಎಸ್ಸೆಮ್ಮೆಸ್ ಮೂಲಕ ಮಾಹಿತಿಯನ್ನೂ ಪಡೆಯಬಹುದು.

About Author

Leave a Reply

Your email address will not be published. Required fields are marked *

You may have missed