ನಿಮ್ಮ ಸ್ಮಾರ್ಟ್ ಫೋನ್ ಕೆಳಗೆ ಬಿದ್ದರೆ ಯೋಚಿಸ ಬೇಡಿ ಇಲ್ಲಿದೆ ಟ್ರಿಕ್ಸ್

0

ಸ್ಮಾರ್ಟ್ ಪೋನ್ ಗಳು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ನಮ್ಮ ಬಳಿಯೇ ಬೆಲೆಬಾಳುವ ಮೊಬೈಲ್​ ಫೋನ್​ಗಳಿದ್ದರೂ ಕೆಲವೊಂದು ಟ್ರಿಕ್ಸ್​ (Tricks) ತಿಳಿದೇ ಇರುವುದಿಲ್ಲ. ಮೊಬೈಲ್​ನಲ್ಲಿ ಸಮಸ್ಯೆಯಾದಾಗ ಏನು ಮಾಡಬೇಕೆಂದು ತೋಚದೆ ಸರ್ವೀಸ್​ ಸೆಂಟರ್​ಗಳಿಗೆ ಹೋಗುತ್ತೇವೆ.

ಸಣ್ಣ ಸಣ್ಣ ಸಮಸ್ಯೆಗಳಿಗೂ ಸರ್ವೀಸ್​ ಸೆಂಟರ್​ಗೆ ತೆಗೆದುಕೊಂಡು ಹೋಗದೆ ಕೆಲವೊಂದು ಕೋಡ್​ಗಳನ್ನು ಬಳಸಿ ಮೊಬೈಲ್​ನಲ್ಲಿ ಉಂಟಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು.

ಎಲ್ಲಾ ಕೋಡ್​ (Code)ಗಳು ಆರಂಭವಾಗುವುದು # ನಿಂದಲೇ ಆಗಿದೆ. ಆದರೆ ನೆನಪಿಡಿ ವಿಭಿನ್ನ ಹಾರ್ಡ್​ವೇರ್​​ ತಯಾರಕರು ಬೇರೆ ಬೇರೆ ಕಾನ್ಫಿಗರೇಷನ್​ಅನ್ನು ಬಳಸುವುದರಿಂದ ಈ ಎಲ್ಲಾ ಕೋಡ್​ಗಳು ನಿಮ್ಮ ಫೋನ್​ನಲ್ಲಿ ಇರಲು ಸಾಧ್ಯವಿಲ್ಲ. ಅಲ್ಲದೇ ಎಲ್ಲಾ ಫೋನ್​ಗಳಿಗೂ ಸರಿಹೊಂದುವ ಒಂದೇ ಕೋಡ್​ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಸಾಮಾನ್ಯವಾಗಿ ಮೊಬೈಲ್​ನ ಕೆಲವು ಸಮಸ್ಯೆಗಳಿಗೆ ಬಳಸುವ ಕೋಡ್​ಗಳನ್ನು ಇಲ್ಲಿ ತಿಳಿಸಲಾಗಿದೆ.

ಫೋನ್​ ಸ್ವಿಚ್ಡ್​ ಆಫ್​ ಮಾಡಲು

ಕೆಲವೊಮ್ಮೆ ನಿಮ್ಮ ಫೋನ್​ಗಳ ಸ್ಕ್ರೀನ್​ ಬ್ಲಿಂಕ್​ ಆಗುತ್ತದೆ. ಅಂಥಹ ಸಂದರ್ಭಗಳಲ್ಲಿ ಯಾವಾಗಲೂ ಸ್ವಿಚ್​ ಆಫ್​ ಮಾಡುವಂತೆ ಕೀ ಬಟನ್​ ಅಥವಾ ಸ್ಕ್ರೀನ್​ ಮೇಲೆ ಕಾಣಿಸುವ ಆಯ್ಕೆಯನ್ನು ಬಳಸಿ ಸ್ವಿಚ್​ ಆಫ್​ ಮಾಡಲು ಯತ್ನಿಸಿ. ಮೊಬೈಲ್​ಗೆ ವೈರಸ್​ ಅಟ್ಯಾಕ್​ ಅದಾಗ ಅಥವಾ ಬಟನ್​ಗಳು ಕಾರ್ಯನಿರ್ವಹಿಸದೇ ಇದ್ದಾಗ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಗ ಈ ಕೋಡ್​ಅನ್ನು ಬಳಸಿ ಫೋನ್​ ಅನ್ನು ಸ್ವಿಚ್​ ಆಫ್​ ಮಾಡಬಹುದು. *#*#7594#*#* ಕೋಡ್​ ಉಪಯೋಗಿಸುವ ಮೂಲಕ ಫೋನ್​ ಅನ್ನು ಸ್ವಿಚ್​ ಮಾಡಬಹುದು. ಫೋನ್​ ಸ್ವಿಚ್​ ಮಾಡುವುದು ಅಥವಾ ರೀ ಸ್ಟಾರ್ಟ್​ ಮಾಡುವುದು ಅನೇಕ್ ಫೋನ್​ಗಳ ಸಾಪ್ಟವೇರ್​ಗಳ ಸಮಸ್ಯೆಯನ್ನು ನಿವಾರಿಸುತ್ತದೆ.

ಫೋನ್​ ರೀಸೆಟ್​ ಮಾಡಲು

ನಿಮ್ಮ ಫೋನ್​ ಸರಿಯಾಗಿ ಕೆಲಸ ಮಾಡದಿದ್ದಾಗ ಅಥವಾ ಸ್ಲೋ ಆದಾಗ ಸಮಸ್ಯೆಗಳು ಉಲ್ಬಣಿಸುತ್ತದೆ. ಫೋನ್​ ಸರಿಯಾಗಿ ಕೆಲಸ ಮಾಡದಿದ್ದಾಗ ನಿಮ್ಮ ತಾಳ್ಮೆಯೂ ಕುಸಿಯುತ್ತದೆ. ನಿಮ್ಮ ಫೊನ್​ ಎಷ್ಟೇ ಹೊಸದಾಗಿದ್ದರೂ ಮಾರುವ ಮನಸ್ಥಿತಿ ನಿಮಗೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಫ್ಯಾಕ್ಟರಿ ರೀ ಸೆಟ್​ ಮಾಡುವ ಅಗತ್ಯವಿದೆ. ಇದಕ್ಕಾಗಿ ನಿಮಗೆ ನೀಡಿದ ಪಿನ್​ಗಳ ಅಗತ್ಯವಿದೆ. ಅದು ಸಿಗಿದ್ದರೆ ಈ ಈಸಿ ಕೋಡ್​ ಪ್ರಯತ್ನಿಸಿ. *2767*3855# ಇದು ಫೋನ್​ನ ಫ್ಯಾಕ್ಟರಿ ರಿಸೆಟ್​ ಮಾಡುವ ಸರಳ ಕೋಡ್​ ಆಗಿದೆ.

ಡಾಟಾ SMS ಮೆಸೇಜ್ಗಳನ್ನುಪರೀಕ್ಷಿಸಿಲು

ಇಂದಿನ ದಿನಗಳಲ್ಲಿ ಇಂಟರ್​ನೆಟ್ ಅತೀ ಅಗತ್ಯವಾಗಿದೆ. ಪ್ರತಿದಿನದ ಇಂಟರ್​ನೆಟ್​ ಕೋಟಾಗಳನ್ನು ಹೊರತುಪಡಿಸಿಯೂ ಎಕ್ಸ್ಟಾ ಡಾಟಾ ಬಳಕೆ ಮಾಡುವವರೂ ಇದ್ದಾರೆ. ಕೆಲವೊಮ್ಮ ನಿಮ್ಮ ಡೇಟಾ ಅಥವಾ ಇಂಟರ್​​ನೆಟ್​ ಖಾಲಿಯಾಗಿದೆ ಎಂದು ಗೊತ್ತಾಗುವುದೇ SMS ಬಂದ ಬಳಿಕ. ಅಷ್ಟರಲ್ಲಿ ನಿಮ್ಮ ಇಂಟರ್​ನೆಟ್​ ಖಾಲಿಯಾಗಿರುತ್ತದೆ. ಅದರ ಬದಲು ಈ ಸರಳ ವಿಧಾನದ ಮೂಲಕ ನಿಮ್ಮ ಡಾಟಾ ಎಷ್ಟಿದೆ ಎನ್ನುವುದನ್ನು ತಿಳಿಯಿರಿ. ನಿಮ್ಮ ಡಯಲ್​ ಪ್ಯಾಡ್​ನಲ್ಲಿ *3282# ಅನ್ನು ಹಾಕಿದಾಗ ನಿಮ್ಮ ದೈನಂದಿನ ಡಾಟಾ ಹಾಗೂ ಆ ಕ್ಷಣದಲ್ಲಿ ಉಳಿದಿರುವ ಇಂಟರ್​ನೆಟ್​ಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

About Author

Leave a Reply

Your email address will not be published. Required fields are marked *

You may have missed