ಕೋಳಿ ಮೊದಲಾ? ಮೊಟ್ಟೆ ಮೊದಲಾ? ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ!

0

ಕೋಳಿ ಮೊದಲಾ? ಮೊಟ್ಟೆ ಮೊದಲಾ? ಯಾವಾಗಲೂ ಎಲ್ಲರಲ್ಲೂ ಯಕ್ಷಪ್ರಶ್ನೆಯಾಗಿ ಉಳಿದಿರುವ ಈ ಸಮಸ್ಯೆ ವಿಜ್ಞಾನಕ್ಕೂ ಸವಾಲು. ಮೊಟ್ಟೆ ಮೊದಲಾದರೆ ಅದು ಹೇಗೆ ಬಂತು? ಕೋಳಿಯೇ ಮೊದಲಾದರೆ ಮೊಟ್ಟೆ ಇಟ್ಟವರು ಯಾರು? ಹೀಗೆ ಉಲ್ಟಾಪಲ್ಟಾ ಪ್ರಶ್ನೆಗಳಿಗೆ ಸುಧೀರ್ಘ ಅಧ್ಯಯನದ ಆಧಾರದಲ್ಲಿ ವಿಜ್ಞಾನಿಗಳು ತಾವು ಸಮಸ್ಯೆ ಬಗೆಹರಿಸಿರುವುದಾಗಿ ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

 

ವಿಜ್ಞಾನಿಗಳ ಪ್ರಕಾರ, ಕೋಳಿ ಮತ್ತು ಮೊಟ್ಟೆ ಈ ಎರಡರಲ್ಲಿ ಮೊದಲು ಬಂದದ್ದು ಕೋಳಿ. ಆಧುನಿಕ ಕಾಲದ ಸರೀಸೃಪಗಳು, ಹಕ್ಕಿಗಳು ಮತ್ತು ಸಸ್ತನಿಗಳ ಪೂರ್ವಜರು ಈ ಮೊದಲು ಮೊಟ್ಟೆ ಇರಿಸುತ್ತಿರಲಿಲ್ಲ. ಬದಲಾಗಿ ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತಿದ್ದವು ಎನ್ನುವುದು ಹೊಸ ಅಧ್ಯಯನದ ವಾದ.

51 ಜೀವಿಗಳ ಪಳೆಯುಳಿಕೆಗಳು ಮತ್ತು 29 ಜೀವಂತ ತಳಿಗಳನ್ನು ಮೊಟ್ಟೆ ಇರಿಸುವ (Oviparous) ಹಾಗೂ ನೇರವಾಗಿ ಮರಿಗೆ ಜನ್ಮನೀಡುವ ಜೀವಿಗಳು ಎಂದು ವರ್ಗೀಕರಿಸಿ ನಡೆಸಿದ ವಿಶ್ಲೇಷಣೆ ಆಧಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಓವಿಪರಸ್ ಜೀವಿಗಳು ಗಟ್ಟಿಯಾದ ಅಥವಾ ಮೃದು ಕವಚದ ಮೊಟ್ಟೆಗಳನ್ನು ಇರಿಸಲು ಹೆಸರಾಗಿವೆ. ವಿವಿಪರಸ್ ಜೀವಿಗಳು ಜೀವಂತ ಮರಿಗೆ ಜನ್ಮ ನೀಡುತ್ತವೆ.

ಸಂಶೋಧಕರ ಈ ಹೊಸ ಅಭಿಪ್ರಾಯವನ್ನು ನೇಚರ್ ಎಕಾಲಜಿ ಆಂಡ್ ಎವಲ್ಯೂಷನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. “ಮರಿಹಾಕುವ ಕೆಲವು ಪ್ರಾಣಿಗಳು ತಮ್ಮ ಅಳಿವಿನಂಚಿನಲ್ಲಿ ಅಂಡೋತ್ಪಾದಕವಾಗಿ ಬದಲಾದವು ಎಂಬ ಊಹೆಯ ಜತೆ, ಈಗ ಲಭ್ಯವಿರುವ ಪುರಾವೆಗಳು, ಇಇಆರ್ (ಎಕ್ಸ್‌ಟೆಂಡೆಡ್ ಎಂಬ್ರಿಯೊ ರಿಟೆನ್ಷನ್) ಪುರಾತನ ಮರುಉತ್ಪತ್ತಿ ಮಾದರಿಯಾಗಿತ್ತು ಎಂಬುದನ್ನು ತೋರಿಸುತ್ತದೆ” ಎಂದು ಸಂಶೋಧಕರು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed