ಸೀನುವಿಕೆ ತಡೆಹಿಡಿದರೆ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳೇನು ಗೊತ್ತಾ..?

0

ಸೀನುವಿಕೆ ಅಂದರೆ ಅದು ರೋಗವಲ್ಲ, ರೋಗದ ಲಕ್ಷಣವೂ ಅಲ್ಲ. ಸೀನುವಿಕೆ ಮಾನವನ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಕ್ರಮ.

ಸೀನುವಿಕೆಎಂದರೇನು?
ಮೂಗಿನ ಮೂಲಕ ದೇಹದೊಳಗೆ ಯಾವುದಾದರೂ ವೈರಾಣುಗಳು ಪ್ರವೇಶಿಸಿದರೆ ಅವನ್ನು ಭಾರೀ ಒತ್ತಡದಿಂದ ದೇಹದಿಂದ ಹೊರಹಾಕುವ ಪ್ರಕ್ರಿಯೆಯೇ ಸೀನುವಿಕೆ ಎನ್ನಲಾಗುತ್ತದೆ.

 

ಕೇವಲ ವೈರಾಣುಗಳು ಮಾತ್ರವಲ್ಲ, ಉಸಿರಾಟದ ಸಮಯದಲ್ಲಿ ದೇಹದ ಒಳಬರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ಹೂವಿನ ಪರಾಕ ಮೊದಲಾದ ಸೂಕ್ಷ್ಮ ಕಣಗಳನ್ನು ನಿವಾರಿಸಲೂ ಸೀನುವಿಕೆ ಅಗತ್ಯ ಎನ್ನಲಾಗುತ್ತೆ.

ಸೀನುವಾಗದೇಹದಿಂದದ್ರವಸಿಡಿಯಲುಕಾರಣವೇನು?
ಈ ಪ್ರಕ್ರಿಯೆಯಲ್ಲಿ ಅತಿ ಕ್ಷಿಪ್ರವಾಗಿ ಸಂಕುಚಿಸಿ ವಿಕಸಿಸುವ ಸ್ನಾಯುಗಳು ಒಳಗಿನ ಗಾಳಿಯನ್ನು ಘಂಟೆಗೆ 160 ಕಿ.ಮೀ ವೇಗದಲ್ಲಿ ಹೊರಬಿಳುತ್ತದೆ. ಈ ವೇಳೆ ಅಷ್ಟೂ ಕ್ರಿಮಿ ಮತ್ತು ಧೂಳಿನ ಅಂಶ ಹೊರಹೋಗುತ್ತವೆ. ಗಂಭೀರ ಸೋಂಕಿನಿಂದ ರಕ್ಷಣೆ ಪಡೆಯಲು ಸೀನು ಬರುತ್ತದೆ.

ಸೀನುವಿಕೆತಡೆಹಿಡಿದರೆಆರೋಗ್ಯದಮೇಲೆಬೀರುವಅಡ್ಡಪರಿಣಾಮಗಳೇನು?

  1. ನಡುಕಿವಿಯಸೋಂಕು
    ಸೀನುವಿಕೆಯನ್ನು ತಡೆಹಿಡಿದರೆ ನಡು ಕಿವಿಯ ಸೋಂಕು ಕಾಣಿಸಿಕೊಳ್ಳುತ್ತದೆ. ಸೀನುವುದರಿಂದ ಮೂಗಿನಲ್ಲಿರುವ ಬ್ಯಾಕ್ಟೀರಿಯಾಗಳೆಲ್ಲಾ ಹೊರಹೋಗುತ್ತವೆ. ಆದರೆ ಸೀನುವಿಕೆಯನ್ನು ತಡೆದರೆ ಆ ಬ್ಯಾಕ್ಟೀರಿಯಾಗಳು ಹೋಗದೇ ದ್ರವ ಒತ್ತಡದಿಂದ ನೇರವಾಗಿ ಕಿವಿಯತ್ತ ನುಗ್ಗುತ್ತದೆ. ಈ ಸೋಂಕುಪೀಡಿತ ದ್ರವ ಕಿವಿಯ ಮಧ್ಯಭಾಗಕ್ಕೆ ಹೋಗುವ ಪರಿಣಾಮ ಒಳಗಿವಿ ಸೋಂಕು ಶುರುವಾಗುತ್ತದೆ.
  2. ಎದೆಮೂಳೆಮುರಿಯುವುದು
    ಸೀನುವಿಕೆ ತಡೆಹಿಡಿದರೆ ಎದೆ ಮೂಳೆ ಮುರಿಯುವ ಸಾಧ್ಯತೆ ಇರುತ್ತದೆ. ಕೆಲ ವ್ಯಕ್ತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವೃದ್ಧರಲ್ಲಿ ಹೀಗೆ ಸೀನುವಿಕೆಯನ್ನು ತಡೆಯುವ ಪ್ರಯತ್ನದಿಂದ ಎದೆಗೂಡಿನ ಮೂಳೆಗಳು ಮುರಿದಿರುವ ಪ್ರಕರಣಗಳು ವರಿದಿಯಾಗಿದೆ.
  3. ಕಿವಿತಮಟೆಹರಿಯುವಸಾಧ್ಯತೆ
    ಸೀನುವಾಗ ಬರುವ ಗಾಳಿಯ ಒತ್ತಡವನ್ನು ತಡೆಹಿಡಿದರೆ ಕಿವಿ ತಮಟೆ ಹರಿದು ಹೋಗುವ ಸಾಧ್ಯತೆ ಹೆಚ್ಚಿದೆ. ಸ್ವಾಭಾವಿಕವಾಗಿ ಸೀನುಬಾದ ದುರ್ಬಲ ಮತ್ತು ತೆರೆದಿರುವ ಸ್ಥಳಗಳ ಮೂಲಕವೇ ದ್ರವ ಹಾದು ಹೋಗುತ್ತದೆ. ಆದ್ದರಿಂದ ಸೀನುವಿಕೆಯನ್ನು ತಡೆಹಿಡಿದರೆ ಕಿವಿಗೆ ತೊಂದರೆ ಹೆಚ್ಚು ಎನ್ನಲಾಗುತ್ತೆ.
  4. ಅನ್ಯೂರಿಸಂ(Aneurysm)
    ಸೀನುವಾಗ ದೇಹದಿಂದ ದ್ರವವೊಂದು ಹೊರಬರುತ್ತದೆ. ಆದರೆ ಸೀನುವುದನ್ನ ತಡೆದರೆ ಆ ದ್ರವದ ಒತ್ತಡ ರಕ್ತನಾಳಗಳ ಮೂಲಕ ಮೆದುಳನ್ನೂ ತಲಪುವ ಸಾಧ್ಯತೆ ಇದೆ. ಹೀಗಾದರೆ ಮೆದುಳನ್ನು ಸಂಪರ್ಕಿಸಿರುವ ಸೂಕ್ಷ್ಮ ಭಾಗ ಹರಿದುಹೋಗುತ್ತದೆ. ಪರಿಣಾಮ ಮೆದುಳಿನ ಸುತ್ತ, ತಲೆಬುರುಡೆಯ ಒಳಗೆ ರಕ್ತಸ್ರಾವವಾಗುತ್ತದೆ.
  5. ಕಣ್ಣಿನನರಕ್ಕೆತೊಂದರೆ
    ಸೀನುವಿಕೆಯನ್ನು ತಡೆಹಿಡಿಯುವ ಪ್ರಯತ್ನದಲ್ಲಿ ಗಾಳಿಯ ಒತ್ತಡ ಒಳಗೇ ಉಳಿದು ಕಿವಿಯ ಮಾತ್ರವಲ್ಲ ಕಣ್ಣಿನ ನರದ ಮೇಲೂ ಪರಿಣಾಮ ಬೀರುತ್ತದೆ.

About Author

Leave a Reply

Your email address will not be published. Required fields are marked *

You may have missed