ಬೇಸಿಗೆಯಲ್ಲಿ ತಂಪಾಗಿರೋಕೆ ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

0

ಕೂಲ್ ಆಗಿರೋದನ್ನು ತಿನ್ನಬೇಕು ಅಥವಾ ಕುಡಿಯಬೇಕು ಅನ್ನಿಸುತ್ತೆ. ಅಲ್ಲದೆ ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸಿಗೆ ಹಿತ ಎನ್ನಿಸುತ್ತದೆ. ಇದಕ್ಕಾಗಿ ಇಲ್ಲಿದೆ ಸುಲಭವಾದ ಫ್ರೂಟ್ ಕಸ್ಟರ್ಡ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು :

1. ಹಾಲು- 2 ಕಪ್
2. ಕಸ್ಟರ್ಡ್ ಪೌಡರ್- 2 ಚಮಚ (ಮಾರುಕಟ್ಟೆಯಲ್ಲಿ ಲಭ್ಯ, ವೆನಿಲ್ಲಾ ಫ್ಲೇವರ್ ಆಯ್ದುಕೊಳ್ಳಬಹುದು)
3. ಸಕ್ಕರೆ- 1/4 ಕಪ್
4. ಕಪ್ಪು/ಬಿಳಿ ಸೀಡ್ಲೆಸ್ ದ್ರಾಕ್ಷಿ – 1/4 ಕಪ್(ಕಟ್ ಮಾಡಿಟ್ಟುಕೊಳ್ಳಿ)
5. ಬಾಳೆಹಣ್ಣು – 1/4 ಕಪ್
6. ದಾಳಿಂಬೆ – 1/4 ಕಪ್
7. ಮಾವಿನ ಹಣ್ಣು – 1/4 ಕಪ್
8. ಸೇಬು – 1/4 ಕಪ್
9. ಏಲಕ್ಕಿ – 1/4 ಚಮಚ

ಮಾಡುವವಿಧಾನ:

* ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಕಪ್ ಹಾಲು ಹಾಕಿ ಬಿಸಿ ಮಾಡಿ.
* ಒಂದು ಕಪ್‍ನಲ್ಲಿ ಕಸ್ಟರ್ಡ್ ಪೌಡರ್‍ಗೆ 3 ಚಮಚ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯುತ್ತಿರುವ ಹಾಲಿಗೆ ಬೆರೆಸಿ.
* ಅದಕ್ಕೆ ಸಕ್ಕರೆ ಹಾಕಿ ಸ್ವಲ್ಪ ದಪ್ಪ ಹಾಗೂ ಹಳದಿ ಕಲರ್ ಬರೋವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ ಗೆ ಹಾಕಿ ತಣ್ಣಗಾಗಲು ಬಿಡಿ.
* ಹಾಲು ತಣ್ಣಗಾದ ಬಳಿಕ ಅದಕ್ಕೆ ಕಟ್ ಮಾಡಿದ ದ್ರಾಕ್ಷಿ, ಬಾಳೆಹಣ್ಣು, ದಾಳಿಂಬೆ, ಮಾವಿನ ಹಣ್ಣು, ಸೇಬು, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 2 ಗಂಟೆಗಳ ಕಾಲ ಫ್ರಿಡ್ಜ್‍ನಲ್ಲಿ ಇಟ್ಟು ನಂತರ ಸವಿಯಲು ಕೊಡಿ.

About Author

Leave a Reply

Your email address will not be published. Required fields are marked *

You may have missed