ಹೋಟೆಲ್ ಫುಡ್ ದರ ಏರಿಕೆ

0

ಬೆಂಗಳೂರು: ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಮತ್ತೆ ತಾಗಿದೆ. ಬೆಂಗಳೂರಿನ ಬಹುತೇಕ ಹೋಟೆಲ್​ಗಳು ಹೊಸ ದರಗಳತ್ತ ಮುಖ ಮಾಡಿವೆ.  ಟೀ, ಕಾಫಿ, ತಿಂಡಿ, ಊಟ ಹೀಗೆ ಎಲ್ಲಾ ಆಹಾರ ಪದಾರ್ಥಗಳ ಮೇಲಿನ ದರ ಏರಿಕೆ ಕಂಡಿದೆ.

ಹೌದು.ಹೋಟೆಲ್​  ಮಾಲೀಕರು ಸಹ ದರ ಏರಿಕೆ ಮಾಡಿದ್ದಾರೆ. ಹೀಗಾಗಿ ಹೋಟೆಲ್​ಗಳಲ್ಲಿ ಕಾಫಿ, ಟೀ-ತಿಂಡಿ ಹಾಗೂ ಊಟದ ದರ ಹೆಚ್ಚಳವಾಗಿದೆ.

​ಕಳೆದ ಒಂದು ವಾರದಿಂದ ರಾಜಧಾನಿಯ ಹೋಟೆಲ್ ಗಳಲ್ಲಿ ದರ ಏರಿಕೆಯಾಗಿದೆ. ವಿದ್ಯುತ್ ದರ ಏರಿಕೆಯಿಂದ ಅಲ್ಲಲ್ಲಿ ಮಾಲೀಕರೇ ತಮ್ಮ ತಮ್ಮ ಹೋಟೆಲ್ ಗಳಲ್ಲಿ ದರ ಹೆಚ್ಚಳ ಮಾಡಿಕೊಂಡಿದ್ದಾರೆ. ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಸೂಚನೆ ನೀಡಿದ್ದರು. ಅದರಂತೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಊಟ ಹಾಗೂ ತಿಂಡಿ ದರ ಕನಿಷ್ಠ ಐದು ರೂಪಾಯಿ ಏರಿಕೆಯಾಗಿದೆ. ಇನ್ನು ಕಾಫಿ ಮತ್ತು ಟೀ ದರಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ.

ಮಸಾಲೆ ದೋಸೆ 50 ರುಪಾಯಿ ಇತ್ತು. ಈಗ ವಿದ್ಯುತ್ ದರ ಹೆಚ್ಚಳದಿಂದ 60 ರಿಂದ 70 ರುಪಾಯಿ ಆಗಿದೆ. ಟೀ, ಕಾಫಿ, ಲೇಮನ್ ಟೀ ಮೊದಲು ಹತ್ತು ರುಪಾಯಿ ಇತ್ತು. ಈಗ 12 ರಿಂದ 15 ರುಪಾಯಿಗೆ ಏರಿಕೆಯಾಗಿದೆ. ಹೀಗೆ ಪ್ರತಿಯೊಂದಕ್ಕೂ ಹೋಟೆಲ್​ ಮಾಲೀಕರು ದರ ಹೆಚ್ಚಳ ಮಾಡಿದ್ದು, ಗ್ರಾಹಕರ ಜೇಬು ಸುಡಲಿದೆ. ಇನ್ನು ಹಾಲಿನ ದರ ಸಹ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್​ ಹೇಳಿದ್ದಾರೆ. ಒಂದು ವೇಳೆ ಹಾಲಿ ದರ ಹೆಚ್ಚಳಕ್ಕೆ ಸಮ್ಮತಿಸಿದರೆ ಹಾಲಿನ ಉತ್ಪನ್ನಗಳ ದರ ಸಹ ಏರಿಕೆಯಾಗಲಿ

About Author

Leave a Reply

Your email address will not be published. Required fields are marked *

You may have missed