ಮೆಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿ

0

ಬೆಂಗಳೂರು: ಮೇಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿಯಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮಡಿವಾಳ ಮೆಟ್ರೋ ಕಾಮಗಾರಿ ವೇಳೆ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.

ನಿನ್ನೆ ರಾತ್ರಿ 7 ಘಂಟೆಯ ಸುಮಾರಿಗೆ ಬೋರ್ಡ್ ಬಳಿ ಕ್ರೇನ್ ವಾಲಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.ಸದ್ಯ ಮೆಟ್ರೋ ಸಿಬ್ಬಂದಿಗಳು ಪರಿಶೀಲನೆ ಮಾಡುತ್ತಿದ್ದಾರೆ

ಕೂದಳತೆ ಅಂತರದಲ್ಲಿ ಹತ್ತು ಜನರ ಜೀವ ಬಚಾವ್ ಆಗಿದ್ದು, ಕ್ರೇನ್ ಪಲ್ಟಿ ಹೊಡೆದ ರಭಸಕ್ಕೆ ರಾಜಕಾಲುವೆ ಅಡ್ಡಲಾಗಿ ಹಾಕಿದ್ದ ಕಬ್ಬಿಣದ ಬೇಲಿ ನುಚ್ಚುನೂರಾಗಿದೆ.

ಕ್ರೇನ್ ಬಿದ್ದ ಜಾಗದಲ್ಲೇ ಸರ್ವಿಸ್ ರಸ್ತೆ ಇದ್ದು, ಸರ್ವಿಸ್ ರಸ್ತೆಯಲ್ಲಿ ಸೆಕೆಂಡಿಗೊಂದು ವಾಹನಗಳು ಓಡಾಟ ನಡೆಸುತ್ತವೆ. ಸರ್ವಿಸ್ ರಸ್ತೆಯ ಮೇಲೇಯೇ ಅತ್ಯಂತ ಭಾರವಾದ ಕ್ರೇನ್ ಬಿದ್ದಿದ್ದು, ಬಿದ್ದ ರಭಸಕ್ಕೆ ಕ್ರೇನ್ ನ ಬಲಿಷ್ಠವಾದ ಕಬ್ಬಿಣ ಭಾಗ ತುಂಡಾಗಿದೆ.

ಆಟೋ, ಕಾರ್, ಬೈಕ್ ಮೇಲೆ ಬಿದ್ದಿದ್ರೆ ವಾಹನ ಸವಾರರು ಬದುಕುಳಿಯುವ ಯಾವ ಚಾನ್ಸ್ ಕೂಡಾ ಇರುತ್ತಿರಲಿಲ್ಲ. ಕ್ರೇನ್ ಬಿದ್ದ ಜಾಗದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಲಿಲ್ಲ. ಸಧ್ಯ ಬಿದ್ದ ಕ್ರೇನ್ ಅನ್ನು ಮೆಟ್ರೋ ಸಿಬ್ಬಂದಿ ಎತ್ತಿ ನಿಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed