ಭದ್ರತಾ ವೈಫಲ್ಯ ಹಿನ್ನೆಲೆ: ವಿಧಾನಸೌಧಕ್ಕೆ ಹೈಟೆಕ್ ಭದ್ರತಾ ವ್ಯವಸ್ಥೆ

0

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಹಾಗೂ ಅತಿ ನಿರ್ಬಂಧಿತ ಕಟ್ಟಡ ಎನಿಸಿರುವ ವಿಧಾನಸೌಧದ ಭದ್ರತೆ ಹೊಣೆಗಾರಿಕೆಯನ್ನು ಸರ್ಕಾರ ಹೇಗೆ ನಿರ್ವಹಿಸಿದೆ ಗೊತ್ತಾ..

ಇತ್ತೀಚಿಗೆ ಭದ್ರತಾ ಲೋಪ ಭಾರಿ ಚರ್ಚೆಗೆ ಕಾರಣವಾಗಿತ್ತು. ಅನಾಮಧೇಯ ವ್ಯಕ್ತಿಯೋರ್ವ ಇದ್ದಕ್ಕಿದ್ದಂತೆ ಕಲಾಪದ ನಡುವೆ ಕಾಣಿಸಿಕೊಂಡಿದ್ದು ಭದ್ರತಾ ಲೋಪವನ್ನು ಎತ್ತಿ ಹಿಡಿದಿತ್ತು.

ಈ ರೀತಿಯ ಭದ್ರತಾ ಲೋಪದಿಂದ ಭಾರೀ ಮುಜುಗರಕ್ಕೀಡಾದ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದ್ದು, ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಭಾರಿ ಭದ್ರತೆ ಕೈಗೊಳ್ಳಲು ಮುಂದಾಗಿದೆ.

ಹೊಸ ಭದ್ರತಾ ಕ್ರಮದ ಮುಖಾಂತರ ಪಾರ್ಲಿಮೆಂಟ್​ನ ತಂತ್ರಜ್ಞಾನವನ್ನೂ ಬಳಸಲು ಸರ್ಕಾರ ಮುಂದಾಗಿದ್ದು, ಮೂರು ಹಂತಗಳ ಭದ್ರತಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಹೈ ಟೈಕ್ನಾಲಜಿ ಆಧರಿತ ಟೈಟ್ ಬಂದೋಬಸ್ತ್ ಮಾಡಲು ಮುಂದಾಗಿದ್ದು, ಅಪರಿಚಿತರು ಅಥವ ಶಂಕಿತರು ಯಾವುದೇ ರೀತಿ ಎಂಟ್ರಿ ಕೊಡದಂತೆ ತಡೆಯಲು ತಯಾರಿ ನಡೆಸಿದೆ.

ವಿಧಾನಸೌಧ ಹಾಗೂ ವಿಕಾಸಸೌಧ ಒಳ ಪ್ರವೇಶಕ್ಕೆ ಮೂರು ಸುತ್ತಿನ ಭದ್ರತೆ ಕೈಗೊಳ್ಳಲಾಗುತ್ತಿದೆ. ಬರುವವರಿಗೆ ಲೇಸರ್ ಐಡೆಂಟಿಟಿ ಸೆನ್ಸಿಟಿವ್ ಐಡಿ ಕಾರ್ಡ್ ನೀಡಲಾಗುತ್ತೀದೆ. ಈ ಮೂಲಕ ಅನುಮತಿ ಇದ್ದವರಿಗೆ ಐಡಿ ಪರಿಶೀಲಿಸಿ ಒಳಗೆ ಬಿಡಲಾಗುತ್ತದೆ. ಬಳಿಕ ಹೈ-ಅಂಡ್ ಸಿಸಿಟಿವಿ ಕ್ಯಾಮರಾ, ಕಂಟ್ರೋಲ್ ರೂಂ, ಸ್ಕ್ಯಾನರ್​ಗಳಿಂದ ಸಹ ನಿಗಾ ವಹಿಸಲಿದ್ದು, ಒಳಗೆ ಪ್ರವೇಶಿಸಲು ವಿಸಿಟರ್​ಗಳಿಗೆ ಸ್ಮಾರ್ಟ್ ಪಾಸ್ ಕಡ್ಡಾಯವಾಗಿ ಇರಬೇಕಾಗಿದೆ.

About Author

Leave a Reply

Your email address will not be published. Required fields are marked *

You may have missed