ಬೀದರ್ ಪೊಲೀಸರಿಂದ ಇಬ್ಬರು ಡ್ರಗ್ಸ್ ಸಾಗಿಸುತ್ತಿದ್ದವರ ಅರೆಸ್ಟ್

0

ಬೀದರ್: ಭಾರೀ ಮತ್ತು ಭರಿಸುವ ಎಂಡಿಎಂಎ ಡ್ರಗ್ಸ್‌ನ್ನು ಸಾಗಿಸುತ್ತಿದ್ದ ಇಬ್ಬರನ್ನು ಬೀದರ್ ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರಿಂದ 50 ಲಕ್ಷ ರೂ. ಸೀಜ್ ಮಾಡಿದ್ದಾರೆ.

ಡ್ರಗ್ಸ್‌ನ್ನು ಆರೋಪಿಗಳು ಹುಮ್ನಾಬಾದ್‍ನ ರಾಷ್ಟ್ರೀಯ ಹೆದ್ದಾರಿ 65ರ ಮೂಲಕ ಮುಂಬೈನಿಂದ (Mumbai) ಹೈದರಾಬಾದ್‍ಗೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಬೀದರ್ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿಂದ 499 ಗ್ರಾಂ. ಎಂಡಿಎಂಎ, ಒಂದು ಬುಲೆರೋ ಜೀಪ್, 2 ಮೊಬೈಲ್, ಜೊತೆಗೆ ಡ್ರಗ್ಸ್ ತೂಕ ಮಾಡುವ ಯಂತ್ರ ಸೇರಿದಂತೆ ಒಟ್ಟು 55 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಎಸ್‍ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಎಎಸ್‍ಪಿ ಮಹೇಶ್ ಮೇಘಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed