ಬೆಂಗಳೂರು ಯುನಿವರ್ಸಿಟಿ ಮೂಲಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

0

ಬೆಂಗಳೂರು: ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿಲ್ಲ, ಉತ್ತಮ ಹಾಸ್ಟೆಲ್ ವ್ಯವಸ್ಥೆ ಇಲ್ಲ, ಗುಣಮಟ್ಟದ ಶೌಚಾಲಯ ಸೇರಿದಂತೆ ಅನೇಕ ಸೌಕರ್ಯಗಳಿಲ್ಲ ಎಂದು ಆರೋಪಿಸಿ.ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಎಂದು ತಿಳಿಯುವುದಾದರೆ ಇಲ್ಲಿನ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗಿದೆ ಎಂಬ ಉತ್ತರ ಸಿಗುತ್ತದೆ.ವಿದ್ಯಾರ್ಥಿಗಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಇದನ್ನು ಕೂಡ ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಗರಂ ಆಗಿದ್ದಾರೆ.ಈ ಹಿನ್ನೆಲೆ ವಿವಿ ಆಡಳಿತ ಮಂಡಳಿ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳು

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬಂದ್​ಗೆ ಕರೆ ನೀಡಿದ್ದು ವಿವಿ ಮುಂದೆ ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ.

ವಿದ್ಯಾರ್ಥಿಗಳಮೂಲಬೇಡಿಕೆಯೇನು?

  • ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳು
  • ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮ ಹಾಸ್ಟೆಲ್ ವ್ಯವಸ್ಥೆ
  • ಸ್ಮಾರ್ಟ್ ಕ್ಲಾಸ್
  • ಸ್ಕಿಲ್ ಡೆವೆಲಪ್ಮೇಂಟ್ ಕ್ಲಾಸ್
  • ಉತ್ತಮ ಲ್ಯಾಬ್ ವ್ಯವಸ್ಥೆ
  • ಸ್ವಿಮ್ಮಿಂಗ್ ಪೂಲ್ ದುರಸ್ತಿ
  • ಕೋಚಿಂಗ್ ಕ್ಲಾಸ್
  • 24/7 ಗ್ರಂಥಾಲಯಕ್ಕೆ ಬೇಡಿಕೆ
  • ಕುಡಿಯುವ ನೀರಿನ ವ್ಯವಸ್ಥೆ
  • ಕ್ರಿಡೋಪಕರಣಗಳು- ದೈಹಿಕ ವ್ಯಾಯಾಮ ಶಾಲೆ

    – ಉತ್ತಮ ಹೊರ ಕ್ರೀಡಾಂಗಣ

    – ಉತ್ತಮ ಒಳ ಕ್ರೀಡಾಂಗಣ

About Author

Leave a Reply

Your email address will not be published. Required fields are marked *

You may have missed