ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಶಾಕ್

0

ಬೆಂಗಳೂರು ;– ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ಶಾಕ್ ಎದುರಾಗಿದೆ. ತರಕಾರಿ ಹಾಗು ದಿನನಿತ್ಯ ಬಳಸುವ ವಸ್ತುಗಳು ಗಗನಕುಸುಮವಾದ ಹಿನ್ನೆಲೆ ತರಕಾರಿ ಖರೀದಿಗೂ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಎದುರಾಗಿದೆ.

ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕದ ಕೊರತೆ ಎದುರಾಗಿದೆ.

ಅಂಗನವಾಡಿ ಕೇಂದ್ರಗಳು‌ ನೀಡುತ್ತಿರೋ ಊಟದಲ್ಲಿ ತರಕಾರಿ ತುಂಡುಗಳೆ ನಾಪತ್ತೆ ಆಗಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು ಮೊರೆ ಹೋಗಿದ್ದಾರೆ. ಮಕ್ಕಳು ಮತ್ತು ಬಾಣಂತಿಯಾರಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿತ್ತು. ಬೆಲೆ ಏರಿಕೆ ಬೆನ್ನಲೆ ಅಂಗನವಾಡಿಗಳಲ್ಲಿ ಒದಗಿಸುತ್ತಿರುವ ಆಹಾರದಲ್ಲಿ ಪೌಷ್ಠಿಕತೆ ಕಡಿಮೆ ಇದೆ. ಸೊಪ್ಪು, ತರಕಾರಿ ಊಟ ನೀಡುತ್ತಿದ್ದ ಕೇಂದ್ರಗಳು, ಇದೀಗ ಸೊಪ್ಪು, ತರಕಾರಿ ಗಗನಕೆ ಏರಿದ ಪರಿಣಾಮ ಬೇಳೆಸಾರು ಮತ್ತು ತಿಳಿಸಾರಿಗೆ ಫಿಕ್ಸ್ ಆಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಎಲ್ಲಾ ವಲಯಗಳಲ್ಲೂ ಕಳವಳ ವ್ಯಕ್ತವಾಗಿದೆ.

About Author

Leave a Reply

Your email address will not be published. Required fields are marked *

You may have missed