ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಸರಿಯಾಗಿ ನಿರ್ಮಾಣ ಮಾಡಿಲ್ಲ: ಜಿ.ಪರಮೇಶ್ವರ್​

0

ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳವಾಗಿದೆ ಎಂದು ವಿಧಾನಸಭೆಯಲ್ಲಿ ರಾಜಾಜಿನಗರ ಶಾಸಕ ಸುರೇಶ್​ಕುಮಾರ್​ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಸರಿಯಾಗಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಿಲ್ಲ.

ಬಹಳಷ್ಟು ನ್ಯೂನತೆಗಳೊಂದಿಗೆ ದಶಪಥ ನಿರ್ಮಾಣ ಮಾಡಲಾಗಿದೆ. ರಸ್ತೆ ತಿರುವುಗಳಿಗೆ, ವೇಗ ಮಿತಿ‌ ಇಳಿಕೆಗೆ ಯಾವುದೇ ಸೂಚನಾ ಫಲಕಗಳಿಲ್ಲ. ವೇಗವಾಗಿ ವಾಹನ ಓಡಿಸಿ ಬಂದಾಗ ಅಪಘಾತಗಳಾಗುತ್ತಿವೆ ಎಂದರು.

ಏತ ನೀರಾವರಿ ಯೋಜನೆಗೆ ಉಚಿತ ವಿದ್ಯುತ್ ಕೊಡಿ ಎಂದು ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಪ್ರಶ್ನೆಗೆ ಉಪಮುಖ್ಯ ಡಿಕೆ ಶಿವಕುಮಾರ್​ ಉತ್ತರಿಸಿದರು. ಏತ ನೀರಾವರಿ ಯೋಜನೆಗೆ ಬಳಕೆ ಮಾಡಿಕೊಳ್ಳುತ್ತಿರುವ ವಿದ್ಯುತ್​​ಗೆ ಬಿಲ್ ಕಟ್ಟಿಲ್ಲ. ಕೋಟಿ ಕೋಟಿ ಹಣ ಬಾಕಿ ಇಟ್ಟುಕೊಂಡಿದ್ದಾರೆ. ತುಮಕೂರು ಗ್ರಾಮಾಂತರ, ಚನ್ನಪಟ್ಟಣದಲ್ಲಿ ಕೆರೆ ತುಂಬಿಸಲು ಏತ ನೀರಾವರಿ ಯೋಜನೆ ಬೇಕು ಅಂತಾರೆ.

ಯಾರು ಸಹ ಇಂಧನ ಇಲಾಖೆಗೆ ಹಣ ಕೊಡುತ್ತಿಲ್ಲ. ತುಮಕೂರು ಗ್ರಾಮಾಂತರದಲ್ಲಿ ಆರು ಕೋಟಿ ಹಣ ಕೊಡಬೇಕು. ಚನ್ನಪಟ್ಟಣದಲ್ಲಿ ಐದು ಕೋಟಿ ಬಾಕಿ ಇದೆ. ಪಂಚಾಯತ್ ಅವರಿಗೆ ನೀರು ಬೇಕು ಅಂದ್ರೇ ಹಣ ಕೊಡಲ್ಲ. ಇಂಧನ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸದನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

About Author

Leave a Reply

Your email address will not be published. Required fields are marked *

You may have missed