ಟಿ.ಎ.ಶರವಣರಿಗೆ “ಗ್ಲೋಬಲ್ ಐಕಾನ್ ಅವಾರ್ಡ್”

0

ಬೆಂಗಳೂರು: ವರ್ಲ್ಡ್ ಅಸೋಸಿಯೇಷನ್ ಆಫ್ ಸ್ಮಾಲ್ & ಮೀಡಿಯಂ ಎಂಟರ್‌ಪ್ರೈಸಸ್ ಮೂಲಕ ಗ್ಲೋಬಲ್ ಐಕಾನ್ ಅವಾರ್ಡ್ಸ್ 2023 ಜನರು ಮತ್ತು ಸಂಸ್ಥೆಗಳನ್ನು ಅವರ ಅತ್ಯುತ್ತಮ ಸಾಧನೆಗಳು ಮತ್ತು ಕೊಡುಗೆಗಳಿಗಾಗಿ ಗೌರವಿಸುವ ಒಂದು ಉಪಕ್ರಮವಾಗಿದೆ. ಅದೇ ರೀತಿ ಕರ್ನಾಟಕದಿಂದ ಟಿ.ಎ.ಶರವಣ ಅವರನ್ನು ಆಯ್ಕೆ ಮಾಡಿ “ಗ್ಲೋಬಲ್ ಐಕಾನ್ ಅವಾರ್ಡ್” ಪ್ರಶಸ್ತಿ ನೀಡಲಾಗುವುದು.

ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಅಧ್ಯಕ್ಷರಾದ ಟಿ.ಎ.ಶರವಣ ಅವರಿಗೆ ಲಂಡನ್ ಯುಕೆ ಸಂಸತ್ತಿನಲ್ಲಿ ಗ್ಲೋಬಲ್ ಎಕನಾಮಿಕ್ ಫೋರಮ್ G20 ಶೃಂಗಸಭೆಯಿಂದ “ಗ್ಲೋಬಲ್ ಐಕಾನ್ ಅವಾರ್ಡ್” ದೃಢೀಕರಣ ಸಿಕ್ಕಿದಕ್ಕೆ ಶುಭಾಯಗಳು ಕೋರಿ ಪ್ರಶಸ್ತಿ ಪಡೆಯಲು ವೈಯಕ್ತಿಕವಾಗಿ ಆಹ್ವಾನ ನೀಡಿರುತ್ತಾರೆ

ಒನ್ ಎರ್ತ್ ಒನ್ ಫ್ಯಾಮಿಲಿ ಒನ್ ಫ್ಯೂಚರ್ ಇನಿಶಿಯೇಟಿವ್ ಸಂಘಟನಾ ಸಮಿತಿಯ ಪರವಾಗಿ, ಲಂಡನ್ ಯುಕೆ ಪಾರ್ಲಿಮೆಂಟ್‌ನಲ್ಲಿ ಗ್ಲೋಬಲ್ ಎಕನಾಮಿಕ್ ಫೋರಮ್ G20 ಶೃಂಗಸಭೆಯ ಪ್ರತಿಷ್ಠಿತ “ಗ್ಲೋಬಲ್ ಐಕಾನ್ ಅವಾರ್ಡ್” ಗೆ ನಿಮ್ಮ ಆಯ್ಕೆಗಾಗಿ ನಾವು ನಿಮ್ಮನ್ನು ಅಭಿನಂದಿಸುತ್ತೇವೆ. ಪ್ರಶಸ್ತಿಯನ್ನು ಪಡೆಯಲು ಲಂಡನ್‌ಗೆ ವೈಯಕ್ತಿಕವಾಗಿ ಬರಲು ನಾವು ನಿಮ್ಮನ್ನು ವಿನಂತಿಸುತ್ತೇವೆ.

ಅಧಿಕೃತವಾಗಿ ಶೃಂಗಸಭೆಯು 14 ರಿಂದ 18 ನೇ ಸೆಪ್ಟೆಂಬರ್, 2023 ರವರೆಗೆ ನಡೆಯುತ್ತದೆ. ಇದರ ಸಂಪೂರ್ಣ ಕಾರ್ಯಕ್ರಮದ ವಿವರವನ್ನು ತಿಳಿಸಲಾಗಿದೆ ನೀವು ಬಂದು ಆಹ್ವಾನ ಸ್ವೀಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಗ್ಲೋಬಲ್ ಎಕನಾಮಿಕ್ ಫೋರಂ ಅಧ್ಯಕ್ಷ ಡಾ. ಹರಿಕೃಷ್ಣ ಮರಮ್ ಅವರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed