ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಇಲ್ಲದೇ 20 ಅಂಕ ಜಾರಿ

0

ಬೆಂಗಳೂರು: ಪಿಯುಸಿ ಪರೀಕ್ಷೆಗೆ ಸರ್ಕಾರ ಹೊಸ ಅಂಕ ಮಾದರಿ ಜಾರಿಗೊಳಿಸಿದೆ. 2023-24ನೇ ಸಾಲಿನ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಭಾಷಾ ವಿಷಯಗಳು ಮತ್ತು ಕೋರ್ ಸಬ್ಜೆಕ್ಟ್ ವಿಷಯಗಳಿಗೆ ಈ ನಿಯಮ ಪಾಲಿಸುತ್ತದೆ.

ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಗೆ ಈ ನಿಯಮ ಅನ್ವಯ ಆಗಲಿದೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ದೃಷ್ಟಿಯಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಷ್ಟು ದಿನ ವಿಜ್ಞಾನ ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು. 70 ಅಂಕಕ್ಕೆ ಥಿಯರಿ ಇತ್ತು. ಪ್ರಾಯೋಗಿಕ ಪರೀಕ್ಷೆ ಇಲ್ಲದೆ ವಿಷಯಗಳಿಗೆ ಇನ್ನು ಮುಂದೆ ಆಂತರಿಕ ಅಂಕ ನೀಡಲು ನಿರ್ಧಾರ ಮಾಡಲಾಗಿದೆ. 100 ಅಂಕಕ್ಕೆ ಇದ್ದ ನಿಯಮ ಬದಲಾವಣೆ ಮಾಡಿ 80 ಅಂಕ ಥಿಯರಿ, 20 ಆಂತರಿಕ ಅಂಕ ನೀಡುವ ನಿಯಮ ಜಾರಿ ಮಾಡಲಾಗಿದೆ.

ಪ್ರಾಯೋಗಿಕ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್, ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ, ಹಿಂದುಸ್ಥಾನಿ ಸಂಗೀತ ಮತ್ತು NSQF ವಿಷಯಗಳು, IT ಆಟೋಮೊಬೈಲ್, ರಿಟೇಲ್, ಬ್ಯೂಟಿ, ವೆಲ್ ನೆಸ್ ಕೋರ್ಸ್ ಗೆ ಈ ನಿಯಮ ಇಲ್ಲ. ಇವುಗಳಿಗೆ 70:30 ಅಂಕಗಳ ಮಾದರಿಯಲ್ಲಿ ಪರೀಕ್ಷೆ ಮುಂದುವರಿಯುತ್ತದೆ. 70 ಅಂಕ ಥಿಯರಿ, ಪ್ರಾಯೋಗಿಕ ಅಂಕ 30 ಮುಂದುವರಿಕೆ ಆಗಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಅಂತರಿಕ ಅಂಕ ನೀಡಲಾಗುತ್ತದೆ. 100 ಅಂಕಕ್ಕೆ ಇದ್ದ ಪರೀಕ್ಷೆ ಇನ್ನು ಮುಂದೆ 80 ಅಂಕ ಥಿಯರಿ, 20 ಆಂತರಿಕ ಅಂಕಗಳಲ್ಲಿ ನಡೆಯಲಿದೆ.

About Author

Leave a Reply

Your email address will not be published. Required fields are marked *

You may have missed