ವಿಧಾನಸೌಧದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ

0

ಬೆಂಗಳೂರು: ವಿಧಾನ ಪರಿಷತ್ ಸದಸ್ಯರಿಗೆ ವಿಧಾನಸೌಧದಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆ ಆಗುತ್ತಿರುವ ಬಗ್ಗೆ ಕಲಾಪದಲ್ಲಿ ಚರ್ಚಿಸಲಾಯಿತು. ಪ್ರಶ್ನೋತ್ತರ, ಶೂನ್ಯವೇಳೆ ಅವಧಿ ಮುಗಿದ ಕೂಡಲೇ ಬಿಜೆಪಿಯ ಡಿ.ಎಸ್ ಅರುಣ್ ವಿಷಯ ಪ್ರಸ್ತಾಪ ಮಾಡಿದರು.

ನಮಗೆ ವಿಧಾನಸೌಧ ಮತ್ತು ಶಾಸಕರ ಭವನದಲ್ಲಿ ಪಾರ್ಕಿಂಗ್‌ಗೆ ಸಮಸ್ಯೆ ಇದೆ.

ಕಾರ್ ಪಾರ್ಕಿಂಗ್ ಮಾಡಲು ಆಗ್ತಿಲ್ಲ. ವಿಧಾನಸೌಧದಲ್ಲಿ ಯಾರ್ಯಾರೋ ಎಲ್ಲೆಲ್ಲೋ ಕಾರು ನಿಲ್ಲಿಸುತ್ತಾರೆ. ಇದರಿಂದ‌ ನಮಗೆ ಸಮಸ್ಯೆ ಆಗ್ತಿದೆ. ಪಾಸ್ ಇಲ್ಲದೇ ಇರೋರ ಕಾರ್ ಕೂಡಾ ಪಾರ್ಕಿಂಗ್ ಆಗ್ತಿದೆ. ಇದರಿಂದ ಶಾಸಕರಾದ ನಮಗೆ ಸಮಸ್ಯೆ ಆಗ್ತಿದೆ ಅಂತಾ ಸಭಾಪತಿಗಳ ಗಮನಕ್ಕೆ ತಂದರು.

ಕೂಡಲೇ ಸಭಾ ನಾಯಕರು ಇದನ್ನ ಸರಿ ಮಾಡುವಂತೆ ಸಭಾಪತಿ ಹೊರಟ್ಟಿ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕರ, ಬೋಸರಾಜು, ಸರಿಪಡಿಸುವುದಾಗಿ ತಿಳಿಸಿದರು.

ಈ ವೇಳೆ ಜೆಡಿಎಸ್‌ನ ಶರವಣ, ‌ಕಾರ್ ಪಾರ್ಕಿಂಗ್ ಗೆ QR ಕೋಡ್ ಜಾರಿ ಮಾಡಿ ಅಂತಾ ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ‌ ಸಚಿವ ಹೆಚ್.ಕೆ ಪಾಟೀಲ್, ವಿಧಾನಸೌಧದಲ್ಲಿ ರಾಜಕಾರಣಿಗಳ ಪಾಸ್ ಅನ್ನ ಬಳಕೆ ಮಾಡೋ ದಲ್ಲಾಳಿಗಳು ಇದ್ದಾರೆ. ಇದಕ್ಕೆ ಕಡಿವಾಣ ಹಾಕೋ ಕೆಲಸ ಮಾಡಬೇಕು. ಕೊನೆದಾಗಿ ಸಭೆ ‌ಮಾಡಿ ಸಮಸ್ಯೆ ಪರಿಹಾರ ಮಾಡೋಣ ಅಂತ ಸಭಾಪತಿಗಳು ತಿಳಿಸಿ ಚರ್ಚೆಗೆ ಅಂತ್ಯ ಹಾಡಿದ್ರು.

About Author

Leave a Reply

Your email address will not be published. Required fields are marked *

You may have missed