ಶಾಸಕ ಎಂ. ಸತೀಶ್ ರೆಡ್ಡಿ ಅವರ ತಾಯಿ ವಿಧಿವಶ

0

ಬೆಂಗಳೂರು ;- ಶಾಸಕ ಸತೀಶ್ ರೆಡ್ಡಿಯವರ ತಾಯಿ ಅಂತಿಮ ದರ್ಶನ ಪಡೆದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿಅವರ ತಾಯಿ ಪಾಪಮ್ಮ ವಿಧಿವಶರಾಗಿದ್ದಾರೆ. 80 ವರ್ಷ ವಯಸ್ಸಾಗಿದ್ದ ಪಾಪಮ್ಮ ಅವರು ಕಳೆದ ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಬೆಳಗ್ಗೆ ನಿವಾಸದಲ್ಲಿ ಪಾಪಮ್ಮ ನಿಧನರಾಗಿದ್ದಾರೆ. ಹೊಂಗಸಂದ್ರದ ಸತೀಶ್ ರೆಡ್ಡಿ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ಅಶೋಕ್, ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ವಿಜಯೇಂದ್ರ ಸಚಿವ ರಾಮಲಿಂಗಾರೆಡ್ಡಿ ಹಾಗೂ ತೇಜಸ್ವಿ ಸೂರ್ಯ MP ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.

About Author

Leave a Reply

Your email address will not be published. Required fields are marked *

You may have missed