ಹೆಬ್ಬುಲಿ ಢರ್ ಗಯಾ ! – ಟ್ರಬಲ್ ಶೂಟರ್ ಸೈಲೆಂಟ್ ಆದ ಇಂಟ್ರೆಸ್ಟಿಂಗ್ ಸ್ಟೋರಿ

1 Star2 Stars3 Stars4 Stars5 Stars (No Ratings Yet)
Loading...

ಹೆಬ್ಬುಲಿ ಢರ್ ಗಯಾ ! – ಟ್ರಬಲ್ ಶೂಟರ್ ಸೈಲೆಂಟ್ ಆದ ಇಂಟ್ರೆಸ್ಟಿಂಗ್ ಸ್ಟೋರಿ

ಅವರು ಹೇಳಿಕೇಳಿ ಕಾಂಗ್ರೆಸ್‍ನ ಟ್ರಬಲ್ ಶೂಟರ್. ಪಕ್ಷಕ್ಕೆ ಏನೇ ಸಮಸ್ಯೆಯಾದರೂ ನಾನಿದ್ದೇನೆ ಎಂದು ಎದೆ ಸೆಟೆಸಿ ನಿಲ್ಲೋ ಛಾತಿ. ಹೈಕಮಾಂಡ್ ಹೇಳಿದ್ದನ್ನು ಚಾಚೂ ತಪ್ಪದೆ ಮಾಡೋ ಲೀಡರ್. ಆದರೆ, ಈಗ ಕಾಂಗ್ರೆಸ್‍ನ ಈ ಸ್ವಯಂ ಘೋಷಿತ ಟೈಗರ್ ಈಗ ಫುಲ್ ಸೈಲೆಂಟ್ !

ಅಷ್ಟಕ್ಕೂ ಡಿಕೆಶಿವಕುಮಾರ್‍ಗೆ ಆಗಿದ್ದೇನು? ಈಗ್ಯಾಕೆ ಡಿಕೆಶಿ ಸ್ಟೋರಿ ಅಂತಿದ್ದೀರಾ? ಅಲ್ಲೇ ಇರೋದು. ಸರಿಯಾಗಿ ಒಂದೂವರೆ ವರ್ಷದ ಹಿಂದೆ ಗುಜರಾತ್‍ನ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಸ್ಕೆಚ್ ಹಾಕಿತ್ತು. ಆಗ ಸೋನಿಯಾರ ಮುಖವಾಣಿ ಎಂದೇ ಕರೆಯಲ್ಪಡುವ ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆ ಸೋಲೋದು ಪಕ್ಕಾ ಆಗಿತ್ತು. ಹೀಗಾಗಿ, ಕಾಂಗ್ರೆಸ್ ತನ್ನ ಶಾಸಕರನ್ನು ನೇರವಾಗಿ ಬೆಂಗಳೂರಿನ ಬಿಡದಿ ರೆಸಾರ್ಟ್‍ಗೆ ಕಳುಹಿಸಿಕೊಟ್ಟಿತ್ತು. ಡಿಕೆಶಿಯೇ ಅವರಿಗೆ ಆಗ ಕಾವಲುಗಾರ. ಅದಾದ ಮೇಲೆ ಆಗಿದ್ದೆಲ್ಲಾ ನಿಮಗೆ ಗೊತ್ತೇ ಇದೆ. ಇಡಿ-ಐಟಿ ಅಂತ ಡಿಕೆಶಿ ಫುಲ್ ಹೈರಾಣಾಗಿ ಹೋಗಿದ್ದಾರೆ.

ಡಿಕೆಶಿ ಎಷ್ಟರ ಮಟ್ಟಿಗೆ ಕಂಗಾಲಾಗಿದ್ದಾರೆಂದರೆ, ಪಕ್ಷದ ಉಸಾಬರಿಯೇ ಸಾಕು ಎನ್ನುವಷ್ಟರ ಮಟ್ಟಿಗೆ ತಣ್ಣಗಾಗಿದ್ದಾರೆ. ಇದೀಗ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಅವರನ್ನು ಸಂಪರ್ಕಿಸಿ, ಮನವೊಲಿಸಿ ಅಂತ ರಾಜ್ಯದ ಕೈ ನಾಯಕರಿಗೆ ಹೈಕಮಾಂಡ್ ಆದೇಶ ನೀಡಿದೆ. ಎಂದಿನಂತೆ ಸಿದ್ದು ಬಣ ತಟಸ್ಥವಾಗಿದೆ. ಕೊನೆಗೆ ಡಿಕೆಶಿಗೆ ಕೆ ಸಿ ವೇಣುಗೋಪಾಲ್ ಕರೆ ಮಾಡಿದ್ದಾರೆ. ಮೇಡಂ ಹೇಳಿದ್ದಾರೆ, ರೆಸಾರ್ಟ್ ಹತ್ತಿರ ಹೋಗಿ ಅಂತ ಹೇಳಿದ್ದಾರೆ. ಆದರೆ ಡಿಕೆಶಿ ಒಪ್ಪಲಿಲ್ಲ. ಕೆಪಿಸಿಸಿ ಅಧ್ಯಕ್ಷ ಮಾಡಿ ಅಂದರೆ ಹಿಂದೆ ಮುಂದೆ ನೋಡ್ತೀರಿ. ಅಧಿಕಾರ ಕೊಡಲ್ಲ. ಕಷ್ಟ ಬಂದಾಗ ನನ್ನ ನೆನಪಾಗುತ್ತಾ ಅಂತ ಕೊಂಚ ಖಾರವಾಗಿ ಪ್ರಶ್ನಿಸಿದ್ದಾರೆ. ಅದೆಲ್ಲಾ ಆಮೇಲೆ ಮಾತನಾಡೋಣ ಅಂತ ವೇಣುಗೋಪಾಲ್ ಹೇಳಿದ್ದಾರೆ.

ಇದ್ರಿಂದ ಮತ್ತಷ್ಟು ಸಿಟ್ಟಿಗೆದ್ದ ಡಿಕೆಶಿ, ನನ್ನ ಕಷ್ಟ ನನಗೆ ಗೊತ್ತು. ಪಕ್ಷಕ್ಕಾಗಿ ರಿಸ್ಕ್ ತಗೊಂಡು ಇಲ್ಲದ ಕಷ್ಟ ಅನುಭವಿಸ್ತಿದ್ದೇನೆ. ನನ್ನ ಕುಟುಂಬ ಕೂಡಾ ಒದ್ದಾಡ್ತಿದೆ. ನಿಮಗೇನು ಗೊತ್ತು? ಈ ವಿಚಾರದಲ್ಲಿ ತಲೆ ಹಾಕಲ್ಲ. ನನಗೆ ಬೇಡವೇ ಬೇಡ. ಮೋದಿ- ಅಮಿತ್ ಶಾ ಎಂಟ್ರಿಯಾಗಿರೋದ್ರಿಂದ ನನಗೆ ಈ ಸಹವಾಸವೇ ಬೇಡ, ನಮಸ್ಕಾರ ಅಂತ ಫೋನ್ ಲೈನ್ ಕಟ್ ಮಾಡಿದ್ದಾರೆ. ಅಲ್ಲಿಗೆ, ಕರ್ನಾಟಕ ಕಾಂಗ್ರೆಸ್‍ನ ಹೆಬ್ಬುಲಿ ಫುಲ್ ಸೈಲೆಂಟಾದಂತಾಗಿದೆ.

Add Comment