BIG BREAKING- ಕೊರೋನಾಗೆ ಫೈನಲ್ ಡೋಸ್ ಜೊತೆ 15 ಸಾವಿರ ಕೋಟಿ ಕೊಟ್ಟ ಮೋದಿ

1 Star2 Stars3 Stars4 Stars5 Stars (No Ratings Yet)
Loading...

 

ಎಷ್ಟೇ ಹೇಳಿದರೂ ಕೇಳದೆ, ಬೇಕು ಬೇಕೆಂದೇ ಮನೆಯಿಂದ ಹೊರಬರುತ್ತಿದ್ದ ಕೊರೋನಾ ಪ್ರೇಮಿಗಳಿಗೆ ಮೋದಿ ಶಾಕ್ ಕೊಟ್ಟಿದ್ದಾರೆ. ಕೊರೋನಾಗೂ ಮುನ್ನ ಜನರಿಗೇ ಮದ್ದು ಅರೆಯಬೇಕೆಂದು ಚಿಂತಿಸಿದ ಮೋದಿ, ವೈದ್ಯ ಸಮುದಾಯದ ಸಲಹೆ ಪಡೆದು ಲಾಕ್‍ಡೌನ್ ಘೋಷಿಸಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ 21 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದ್ದಾರೆ. ಜನತಾ ಕರ್ಫ್ಯೂ ಸಕ್ಸಸ್ ಮಾಡಿದ್ದೀರಿ. ಇನ್ನು 21 ದಿನ ಇದೇ ರೀತಿ ಸಹಕರಿಸಿ. ಇಲ್ಲದೇ ಹೋದರೆ ದೇಶ 21 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದು ಎಚ್ಚರಿಸಿದರು.

ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಪೊಲೀಸರೊಂದಿಗೆ, ವೈದ್ಯರೊಂದಿಗೆ ಸಹಕರಿಸಿ. 21 ದಿನ ಲಕ್ಷ್ಣಣರೇಖೆ ಎಳೆದುಕೊಳ್ಳಿ ಅಂತ ಮೋದಿ ಮನವಿ ಮಾಡಿದ್ದಾರೆ. ಯಾರೂ ಕೂಡಾ ಹೊಸಿಲು ದಾಟಿ ಹೊರಗೆ ಬರಬೇಡಿ. ನೀವು ಹೊರಗಿಡೋ ಒಂದೊಂದು ಹೆಜ್ಜೆಯೂ ಕೊರೋನಾವನ್ನು ಮನೆಯೊಳಗೆ ಬರಮಾಡಿಕೊಳ್ಳುತ್ತದೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಕೇಂದ್ರ ಸರಕಾರ ವಿಶೇಷ ಟಾಸ್ಕ್ ಫೋರ್ಸ್ ರಚಿಸಿದೆ. ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ 15 ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದಾರೆ. 5 ದಿನಗಳಲ್ಲಿ ಎರಡನೇ ಬಾರಿ ದೇಶ ಉದ್ದೇಶಿಸಿ ಮಾತನಾಡಿದ ಮೋದಿ, 15 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ವೈದ್ಯಕೀಯ ಉಪಕರಣಗಳ ಖರೀದಿ, ಚಿಕಿತ್ಸೆ, ಲ್ಯಾಬ್ ಸ್ಥಾಪನೆ ಸೇರಿದಂತೆ ಕೊರೋನಾ ವಿರೋಧಿ ಉಪಕ್ರಮಗಳಿಗೆ ಈ ಪ್ಯಾಕೇಜ್ ಬಳಸಿಕೊಳ್ಳುವುದಾಗಿ ಮೋದಿ ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ಕೊರೋನಾಗೆ ಚಿಕಿತ್ಸೆಯೇ ಇಲ್ಲ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಒಂದೇ ದಾರಿ. ಬೇರೆ ವಿಧಿಯೇ ಇಲ್ಲ. ಸರಕಾರದ ನಿಯಮಗಳನ್ನು ಮೀರಿದರೆ, ನಿಮ್ಮನ್ನು ನಿಮ್ಮ ಕುಟುಂಬನ್ನು, ಈ ದೇಶವನ್ನು ಯಾರೂ ಉಳಿಸಲು ಸಾಧ್ಯವಿಲ್ಲ ಅಂತ ಮೋದಿ ಫೈನಲ್ ಎಚ್ಚರಿಕೆ ನೀಡಿದ್ದಾರೆ.

Add Comment