ಈದ್-ಮಿಲಾದ್ ಹಬ್ಬವನ್ನು ಕೋವಿಡ್-19 ನಿಯಮಗಳಡಿ ಸರಳವಾಗಿ ಆಚರಿಸಲು ಸೂಚನೆ

ಈದ್-ಮಿಲಾದ್ ಹಬ್ಬವನ್ನು ಈ ಬಾರಿ ಕೋವಿಡ್-19ನ ಶಿಷ್ಟಾಚಾರದೊಂದಿಗೆ ಆಚರಿಸಲು ಸರ್ಕಾರ ಕೆಲವು ನಿಯಮಗಳನ್ನು ಸೂಚಿಸಿದೆ.
ಕವಿತಾಳ ಪೊಲೀಸ್ ಠಾಣೆಯ ASI ಲಿಂಗನಗೌಡ ಅವರು ಈದ್-ಮಿಲಾದ್ ಹಬ್ಬ ಆಚರಿಸಲು ಈ ಕೆಳಕಂಡ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದ್ದಾರೆ.
1. ಸಾಮೂಹಿಕ ಮೆರವಣಿಗೆಯನ್ನು ನಿಷೇಧಿಸಲಾಗಿದೆ.
2.ಯಾವುದೇ ರೀತಿಯ ಪ್ರವಚನ ಕಾರ್ಯಕ್ರಮ,
ಸಮಾರಂಭಗಳನ್ನು ಮಾಡುವಂತಿಲ್ಲ.
3. ಸಾರ್ವಜನಿಕ ಪ್ರದೇಶಗಳಲ್ಲಿ ಸೌಂಡ್ ಸಿಸ್ಟಮ್(DJ) ಬಳಕೆ
ಮಾಡುವಂತಿಲ್ಲ.
4. 60 ವರ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು ಮತ್ತು 10
ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಈದ್-ಮಿಲಾದ್ ಹಬ್ಬ ಆಚರಿಸಬೇಕು.
5. ಮಸೀದಿ,ದರ್ಗಾಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಮಸೀದಿ,ದರ್ಗಾಗಳ ದ್ವಾರದಲ್ಲೇ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು.
ಇದೇ ವೇಳೆ ಕವಿತಾಳದ ಮುಸ್ಲಿಂ ಮುಖಂಡರಾದ ಬಿ.ಎ.ಕರೀಂಸಾಬರವರು ಹೇಳಿಕೆ ನೀಡಿ “ಸರ್ಕಾರದ ಈ ಎಲ್ಲಾ ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲಾ ನಮ್ಮ ಮುಸ್ಲಿಂ ಬಾಂಧವರು ಪಾಲಿಸಿ ಈದ್-ಮಿಲಾದ್ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಿ, ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು” ಎಂದು ಕರೆ ನೀಡಿದ್ದಾರೆ.
ರಾಜು ಕಟ್ಟೀಮನಿ ಕೆ ಟಿವಿ ನ್ಯೂಸ್ ಸಿರವಾರ

Add Comment