ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ರೈತಸಂಘ: ಬ್ರಿಜ್ ಭೂಷಣ್ ಬಂಧನಕ್ಕೆ ಜೂನ್ 9ರ ಗಡುವು

0

ವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್‌ (WFI) ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಸುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ ನೀಡಿದೆ.

ಬ್ರಿಜ್‌ ಭೂಷಣ್‌ ನನ್ನ ಜೂನ್‌ 9ರ ಒಳಗೆ ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ.

ಈ ಕುರಿತು ಮಾತನಾಡಿರುವ ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait), ಬಿಜೆಪಿ ಸಂಸದನೂ ಆಗಿರುವ ಭೂಷಣ್‌ ಅಥ್ಲೀಟ್‌ಗಳಿಗೆ (Wrestlers) ಲೈಂಗಿಕ ಕಿರುಕುಳ ನೀಡಿದ್ದಾರೆ. ಡಬ್ಲ್ಯೂಎಫ್‌ಐ ಮುಖ್ಯಸ್ಥನ ಸ್ಥಾನವನ್ನ ದುರುಪಯೋಗಪಡಿಸಿ ಕೊಂಡಿದ್ದಾರೆ. ಮೇ 9ರ ಒಳಗೆ ಬ್ರಿಜ್‌ ಭೂಷಣ್‌ನನ್ನ ಬಂಧಿಸಬೇಕು. ಜೊತೆಗೆ ಕುಸ್ತಿಪಟುಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನ ಹಿಂಪಡೆಯಬೇಕು.

ಇಲ್ಲದಿದ್ದರೇ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ದೇಶಾದ್ಯಂತ ಪಂಚಾಯ್ತಿ ನಡೆಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕುಸ್ತಿಪಟುಗಳ ಮನವೊಲಿಸುವ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಪ್ರಯತ್ನವೂ ವಿಫಲವಾಗಿದೆ. ಅನುರಾಗ್‌ ಠಾಕೂರ್‌ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರೂ, ಅದಕ್ಕೆ ಒಪ್ಪದ ಕುಸ್ತಿಪಟುಗಳು ಭೂಷಣ್‌ ಬಂಧನವಾಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ.

About Author

Leave a Reply

Your email address will not be published. Required fields are marked *

You may have missed