ಆಂಧ್ರಪ್ರದೇಶದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕನೂ ಇಲ್ಲ: ಗುಲಾಂ ನಬಿ ಆಜಾದ್

0

ವದೆಹಲಿ: 2024ರ ಲೋಕಸಭಾ ಚುನಾವಣೆಗೆ ಮುನ್ನ ವಿಪಕ್ಷಗಳ ಒಗ್ಗಟ್ಟು ಯಾವುದೇ ಫಲಿತಾಂಶ ನೀಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್(Ghulam Nabi Azad) ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕರೆದ ವಿರೋಧ ಪಕ್ಷಗಳ ಸಭೆಗೆ ತಮ್ಮದೇ ಆದ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ)ಯನ್ನು ಆಹ್ವಾನಿಸಿಲ್ಲ.

ಎರಡೂ ಪಕ್ಷಗಳಿಗೆ ಲಾಭ ಇದ್ದಾಗ ಮಾತ್ರ ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಪ್ರಯೋಜನವಾಗುತ್ತದೆ. ಇಬ್ಬರಿಗೂ ಲಾಭದ ಹಂಚಿಕೆಯಲ್ಲಿ ವ್ಯತ್ಯಾಸವಿರಬಹುದು – ಅದು 50-50 ಅಥವಾ 60-40 ಆಗಿರಬಹುದು – ಆದರೆ ಈ ಸಂದರ್ಭದಲ್ಲಿ, ಬೇರೆಯವರಿಗೆ ನೀಡುವುದು ಹಾಗಿರಲಿ ಇಬ್ಬರಿಗೂ ಲಾಭವಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂಗೆ ಒಬ್ಬನೇ ಒಬ್ಬ ಶಾಸಕ ಇಲ್ಲ. ಹೀಗಿರುವಾಗ ಸಿಎಂ ಮಮತಾ ಬ್ಯಾನರ್ಜಿ ಅವರ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಎರಡು ಪಕ್ಷಗಳೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳುತ್ತದೆ? ಇದರಿಂದ ಟಿಎಂಸಿಗೆ ಏನು ಸಿಗಲಿದೆ. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಟಿಎಂಸಿ ಯಾವುದೇ ಶಾಸಕರನ್ನು ಹೊಂದಿಲ್ಲ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ಟಿಎಂಸಿಗೆ ಏನು ನೀಡುತ್ತದೆ?. ಆಂಧ್ರಪ್ರದೇಶದಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕನೂ ಇಲ್ಲ ಎಂದು ಹೇಳಿದರು. ಅದೇ ರೀತಿ ಇಲ್ಲಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿಗೆ ಯಾವ ರಾಜ್ಯದಲ್ಲೂ ಶಾಸಕರಿಲ್ಲ, ಅವರಿಗೆ ಕಾಂಗ್ರೆಸ್ ಏನು ಕೊಡುತ್ತದೆ ಇದನ್ನು ಆಲೋಚಿಸಬೇಕು ಎಂದರು

About Author

Leave a Reply

Your email address will not be published. Required fields are marked *

You may have missed