ಕೇಂದ್ರ ಸರ್ಕಾರ ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ: ಸಂಜಯ್ ರಾವುತ್

0

ಮುಂಬೈ: ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯನ್ನು (Nehru Memorial Museum and Library Society) ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ (Sanjay Raut) ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರವು ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಸಂಜಯ್ ರಾವುತ್, ಇತರ ಪ್ರಧಾನಿಗಳ ಕೊಡುಗೆಯನ್ನು ತೋರಿಸಬೇಕು ಎಂದು ನಾನು ಒಪ್ಪುತ್ತೇನೆ. ಇತರ ಪ್ರಧಾನಿಗಳ ಕೊಡುಗೆಗಳನ್ನು ಪ್ರದರ್ಶಿಸಬಹುದಾದ ಬೇರೆ ವಿಭಾಗವನ್ನು ಮಾಡಬಹುದು, ಆದರೆ ಈಗ ಇರುವ ಮ್ಯೂಸಿಯಂ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ದೇಶದ ಇತಿಹಾಸದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಸಂಜಯ್ ರಾವತ್, ಪಂಡಿತ್ ನೆಹರು ಅವರ ಹೆಸರನ್ನು ಪ್ರಧಾನಿ ಮ್ಯೂಸಿಯಂನಲ್ಲಿ ಇರಿಸಬಹುದಿತ್ತು, ಪಂಡಿತ್ ನೆಹರು ನಮ್ಮ ಮೊದಲ ಪ್ರಧಾನಿ ಮತ್ತು ಅವರ ಕೊಡುಗೆ ದೊಡ್ಡದಾಗಿದೆ, ಆದರೆ ಬಿಜೆಪಿ ಇತಿಹಾಸವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed