ಸಿಕ್ಕಿಂನಲ್ಲಿ ಭಾರತೀಯ ಸೇನೆಯಿಂದ ಯೋಗ ದಿನ ಆಚರಣೆ

0

ವದೆಹಲಿ : ಜೂನ್ 21 ರಂದು, ಪ್ರಪಂಚದಾದ್ಯಂತದ ರಾಷ್ಟ್ರಗಳು ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಈ ಪೈಕಿ ಪ್ರಧಾನಿ ಮೋದಿ ಅಮರಿಕದಲ್ಲಿದ್ದು, 180 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳೊಂದಿಗೆ ವಿಶ್ವಸಂಸ್ಥೆಯ (UN) ಪ್ರಧಾನ ಕಛೇರಿಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಗಳನ್ನು ಮುನ್ನಡೆಸಲಿದ್ದಾರೆ.

ಇದಲ್ಲದೆ, 9ನೇ ವಿಶ್ವಾದ್ಯಂತ 250 ಮಿಲಿಯನ್ ಅಂದರೆ 25 ಕೋಟಿ ಜನರು ಈವೆಂಟ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ‘ವಸುಧೈವ ಕುಟುಂಬಕಂ’ ಯೋಗ ದಿನದ ಥೀಮ್‌ ಆಗಿದೆ.

ಇನ್ನು, 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಸಹ ಯೋಗ ಮಾಡಿದ್ದಾರೆ. ಈ ಪೈಕಿ ಲಡಾಖ್‌ನ ಪಾಂಗಾಂಗ್‌ ಸೋ ಸರೋವರದ ಅದ್ಭುತ ಹಾಗೂ ರಮಣೀಯ ಪರಿಸರದಲ್ಲೂ ಯೋಗಾಬ್ಯಾಸ ಮಾಡಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ದೆಹಲಿಯ ಕಂಟೋನ್‌ಮೆಂಟ್‌ನಲ್ಲಿ ಯೋಗ ಮಾಡಿದ್ದಾರೆ ಎಂದು ವರದಿಯಾಗಿದೆ. ಅದೇ ರೀತಿ, ಅರುಣಾಚಲ ಪ್ರದೇಶದಲ್ಲೂ ಯೋಗ ದಿನಾಚರಣೆ ಆಚರಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed