ಪ್ರಧಾನಿ ನಿವಾಸದ ಮೇಲೆ ಡ್ರೋನ್ ಹಾರಾಟ: ಪೊಲೀಸರ ತನಿಖೆ

0

ವದೆಹಲಿ: ಪ್ರಧಾನಿ ನರೆಂದ್ರ ಮೋದಿ (Narendra Modi) ಅವರ ನಿವಾಸದ (Residence) ಮೇಲೆ ಡ್ರೋನ್ (Drone) ಒಂದು ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದಾಗಿ ವರದಿಯಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು (Delhi Police) ತನಿಖೆ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ ರೆಡ್ ನೋ ಫ್ಲೈ ಝೋನ್ ಅಥವಾ ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ.

 

ಸೋಮವಾರ ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಮೋದಿ ನಿವಾಸದ ಮೇಲೆ ಡ್ರೋನ್ ಸುಳಿದಾಡಿದೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಲೇ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ತೀವ್ರ ತನಿಖೆ ಪ್ರಾರಂಭಿಸಿದ್ದಾರೆ. ಮೋದಿಯವರ ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯವನ್ನು ನಿರ್ವಹಿಸುವ ವಿಶೇಷ ರಕ್ಷಣಾ ತಂಡ ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದೆ.

About Author

Leave a Reply

Your email address will not be published. Required fields are marked *

You may have missed