ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕ್‍ಗಳಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್ ಸ್ಥಾನ

0

ವದೆಹಲಿ: ಬ್ಯಾಂಕ್‍ಗಳ ವಿಲೀನದ ನಂತರ ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕ್‍ಗಳಲ್ಲಿ ಹೆಚ್‍ಡಿಎಫ್‍ಸಿ (HDFC) ಬ್ಯಾಂಕ್ (Bank) ಸ್ಥಾನ ಪಡೆದಿದೆ.

ಜುಲೈ 1 ರಿಂದ ಈ ವಿಲೀನ ಅನ್ವಯವಾಗಲಿದ್ದು, ಹೊಸ ಹೆಚ್‍ಡಿಎಫ್‍ಸಿ ಬ್ಯಾಂಕ್ ಘಟಕವು ಸುಮಾರು 120 ಮಿಲಿಯನ್ ಗ್ರಾಹಕರನ್ನು ಹೊಂದಿರಲಿದೆ.

ಇದು ಜರ್ಮನಿಯ ಜನ ಸಂಖ್ಯೆಗಿಂತ ಹೆಚ್ಚಾಗಿದೆ. ಅಲ್ಲದೇ ಶಾಖೆಯ ನೆಟ್‍ವರ್ಕ್ 8,300 ಕ್ಕಿಂತಲೂ ಹೆಚ್ಚಾಗಲಿದೆ. 1,77,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಇದು ಒಳಗೊಳ್ಳಲಿದೆ

ಎಚ್‍ಎಸ್‍ಬಿಸಿ ಹೋಲ್ಡಿಂಗ್ಸ್ ಪಿಎಲ್‍ಸಿ ಮತ್ತು ಸಿಟಿಗ್ರೂಪ್ ಇಂಕ್ ಸೇರಿದಂತೆ ಉಳಿದ ಬ್ಯಾಂಕ್‍ಗಳಿಗಿಂತ ಹೆಚ್‍ಡಿಎಫ್‍ಸಿ ಈಗ ಮುನ್ನಡೆ ಸಾಧಿಸಿದೆ. ಜೂನ್ 22ರ ವೇಳೆಗೆ ಕ್ರಮವಾಗಿ ಸುಮಾರು 62 ಬಿಲಿಯನ್ ಡಾಲರ್ ಮತ್ತು 79 ಬಿಲಿಯನ್ ಡಾಲರ್ ಬಂಡವಾಳದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‍ಗಳನ್ನು ಹೆಚ್‍ಡಿಎಫ್‍ಸಿ ಹಿಂದಿಕ್ಕಿದೆ.

ಈ ಬಗ್ಗೆ ಹಣಕಾಸು ಸೇವೆಗಳ ಸಂಶೋಧನೆಯ ಮುಖ್ಯಸ್ಥ ಸುರೇಶ್ ಗಣಪತಿಯವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 18% ರಿಂದ 20% ರಷ್ಟು ಬೆಳವಣಿಗೆಯನ್ನು ನಿರೀಕ್ಷೆಯಲ್ಲಿದ್ದೇವೆ. ಗಳಿಕೆಯ ಬೆಳವಣಿಗೆಯಲ್ಲಿ ಉತ್ತಮ ಪ್ರಗತಿ ಇದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಹೆಚ್‍ಡಿಎಫ್‍ಸಿ ಶಾಖೆಗಳನ್ನು ದ್ವಿಗುಣಗೊಳಿಸಲು ಯೋಜಿಸಲಾಗಿದೆ. ವಿಲೀನದ ನಂತರವೂ ಸಹ ಬಲವಾದ ಸಾಲದ ಬೆಳವಣಿಗೆಯನ್ನು ಹೆಚ್‍ಡಿಎಫ್‍ಸಿ ನೀಡುತ್ತದೆ. ಬಳಿಕ ಸ್ಟಾಕ್ ರೇಟ್ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್‍ಡಿಎಫ್‍ಸಿ ಷೇರುಗಳು ಕಳೆದ ವರ್ಷದ ನಿಫ್ಟಿ ಬ್ಯಾಂಕ್ ಸೂಚ್ಯಂಕಕ್ಕಿಂತ ಕಡಿಮೆಯಾಗಿದೆ. ಸ್ಟಾಕ್ ದಾಖಲೆ ಪ್ರಕಾರ 18% ರಿಂದ 20% ರಷ್ಟು ಮತ್ತು ಸ್ವತ್ತುಗಳ ಮೇಲಿನ 2% ನಷ್ಟು ಲಾಭವನ್ನು ಅದು ಅವಲಂಬಿಸಿರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

About Author

Leave a Reply

Your email address will not be published. Required fields are marked *

You may have missed