ಬೀದಿ ನಾಯಿಗಳ ಹಾವಳಿ – ಶಾಲೆಗಳಿಗೆ ರಜೆ ಘೋಷಿಸಿದ ಪಂಚಾಯಿತಿ

0

ಕೋಳಿಕ್ಕೋಡ್;- ಬೀದಿ ನಾಯಿಗಳ ಕಾಟ ತಾಳಲಾರದೆ ಶಾಲೆಗಳಿಗೆ ಪಂಚಾಯತಿ ರಜೆ ಘೋಷಿಸಿದೆ. ಬೀದಿ ನಾಯಿಗಳ ನಿರಂತರ ದಾಳಿಯಿಂದಾಗಿ ಕೋಳಿಕ್ಕೋಡ್‌ನ ಕೂತಲಿ ಪಂಚಾಯತ್ ಸೋಮವಾರ ಏಳು ಶಾಲೆಗಳು ಮತ್ತು 17 ಅಂಗನವಾಡಿಗಳಿಗೆ ರಜೆಯನ್ನೇ ಘೋಷಿಸಿದೆ.

ಭಾನುವಾರ ಸಂಜೆ ಬೀದಿನಾಯಿ ದಾಳಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ.

ಭಾನುವಾರ ಸಂಜೆ ಈ ಪ್ರದೇಶದಲ್ಲಿ ಸುಮಾರು ಐದಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿದ್ದು, ಪರಿಸ್ಥಿತಿ ಅಪಾಯಕಾರಿಯಾಗಿ ಮಾರ್ಪಟ್ಟಿತ್ತು. ಇದರಿಂದ ಮಕ್ಕಳು ಹೊರಗೆ ಹೋಗುವುದು ಕಷ್ಟಕರವಾಗಿದ್ದು, ಎಂಜಿಎನ್‌ಆರ್‌ಇಜಿಎ ಕಾಮಗಾರಿಯೂ ಸ್ಥಗಿತಗೊಂಡಿದೆ.

ಈ ಹಿನ್ನೆಲೆ ಕೂತಲಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ವೆಂಗಪ್ಪಟ್ಟ ಯುಪಿ ಶಾಲೆ, ಕೂತಲಿ ಯುಪಿ ಶಾಲೆ, ಕಲ್ಲೋಡು ಎಲ್‌ಪಿ ಶಾಲೆ, ಪೈತ್ತೋತ್ ಎಲ್‌ಪಿ ಶಾಲೆ ಮತ್ತು ಕಲ್ಲೂರು ಕೂತಾಳಿ ಎಂಎಲ್‌ಪಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

About Author

Leave a Reply

Your email address will not be published. Required fields are marked *

You may have missed