ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಒಂದು ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ: ಅಮಿತಾಭ್ ಕಾಂತ್

0

ವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಒಂದು ಟ್ರಿಲಿಯನ್ ಆರ್ಥಿಕತೆ ಹೊಂದಲಿದೆ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ (Amitabh Kant) ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ದಕ್ಷಿಣ ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ ಅವರು, ಭಾರತದ ಆರ್ಥಿಕತೆಗೆ ಭವಿಷ್ಯದಲ್ಲಿ ದಕ್ಷಿಣ ಭಾರತ (South India) ದ ರಾಜ್ಯಗಳು ದೊಡ್ಡ ಕೊಡುಗೆ ಕೊಡಲಿವೆ ಎಂದು ಪ್ರತಿಪಾದಿಸಿದರು.

 

ಮುಂದಿನ ಎರಡು ವರ್ಷದಲ್ಲಿ ಕರ್ನಾಟಕವು 1 ಟ್ರಿಲಿಯನ್ ಡಾಲರ್ (1 ಲಕ್ಷ ಕೋಟಿ) ಆರ್ಥಿಕತೆಯಾಗಲಿದ್ದು, ತೆಲಂಗಾಣ (Telangana) ವೂ ಈ ಸಾಲಿನಲ್ಲಿ ಸೇರಬಹುದು. ಭಾರತ ಸದ್ಯ 5 ಟ್ರಿಲಿಯನ್ ಡಾಲರ್ ಗುರಿ ಹೊಂದಿದೆ. ಇದು 10 ಟ್ರಿಲಿಯನ್ ಡಾಲರ್ ಗೆ ತಲುಪಿದಾಗ ಭಾರತವನ್ನು ದಕ್ಷಿಣ ಭಾರತದ ರಾಜ್ಯಗಳು ಮುನ್ನಡೆಸುತ್ತವೆ ಎಂದು ಅವರು ಹೇಳಿದರು.

ದೇಶದ ಜಿಡಿಪಿ (GDP) ಗೆ 30% ರಷ್ಟು ಕೊಡುಗೆಯನ್ನು ದಕ್ಷಿಣ ಭಾರತ ನೀಡುತ್ತಿದೆ ಮತ್ತು ದಕ್ಷಿಣದ ರಾಜ್ಯಗಳಲ್ಲಿನ ತಲಾ ಆದಾಯವು ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನದಾಗಿದೆ. ತಮಿಳುನಾಡು ಉತ್ಪಾದನೆಯಲ್ಲಿ ಉತ್ಕೃಷ್ಟವಾಗಿದೆ, ಇದು ಅತ್ಯಾಧುನಿಕ ವಲಯಗಳ ವಿಷಯದಲ್ಲಿ ಲಭ್ಯವಿರುವ ನುರಿತ ಕಾರ್ಮಿಕರಿದ್ದಾರೆ. ತೆಲಂಗಾಣ ಔಷಧೀಯ ವಲಯದಲ್ಲಿ ಉತ್ತಮವಾಗಿದೆ. ಭಾರತದ ಫಾರ್ಮಾದಲ್ಲಿ ಸುಮಾರು 35-40 ಪ್ರತಿಶತ ಉತ್ಪನ್ನಗಳು ಅಲ್ಲಿಂದ ಬರುತ್ತಿವೆ ಎಂದರು.

About Author

Leave a Reply

Your email address will not be published. Required fields are marked *

You may have missed