ವಾಟ್ಸಾಪ್’ನಲ್ಲಿ ಟೈಪ್ ಮಾಡದೇ ಮೆಸೇಜ್ ಮಾಡಲು ಹೀಗೆ ಮಾಡಿ..!

0

ಸಾಮಾನ್ಯವಾಗಿ ವಾಟ್ಸ್​ಆಯಪ್​ನಲ್ಲಿ ಅಥವಾ ಇತರೆ ಆಯಪ್​ಗಳಲ್ಲಿ ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಗೊತ್ತಿರುವ ವಿಷಯ. ಆದರೆ ವಾಟ್ಸ್‌ಆಯಪ್​ನಲ್ಲಿ ಟೈಪ್ ಮಾಡದೆಯೇ ಟೆಕ್ಸ್ಟ್ ಮೆಸೇಜ್ (Text Message) ಅನ್ನು ಕಳುಹಿಸಬಹುದು. ಈ ವೈಶಿಷ್ಟ್ಯ ನಿಮ್ಮ ಧ್ವನಿಯನ್ನು (Voice) ಆಧರಿಸಿ ಕೆಲಸ ಮಾಡುತ್ತದೆ.

ಅಂದರೆ ನೀವು ಕಳುಹಿಸ ಬೇಕಾದ ಸಂದೇಶವನ್ನು ನೀವು ಕೇವಲ ಮಾತನಾಡುವ ಮೂಲಕ ಹೇಳಬೇಕು ಮತ್ತು ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ.

ಇದಕ್ಕಾಗಿ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಇಂಡಿಕ್ ಕೀಬೋರ್ಟ್ (google indic keyboard) ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕು. ವಿಶೇಷ ಎಂದರೆ ಇದು ಕನ್ನಡ ಭಾಷೆಗೂ ಕೂಡ ಸಪೋರ್ಟ್ ಮಾಡುತ್ತದೆ. ಇಂಡಿಕ್ ಕೀಬೋರ್ಟ್ ಆಯಪ್ ಅನ್ನು ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್‌ಆಯಪ್ ಅನ್ನು ತೆರೆಯಬೇಕು. ಬಳಿಕ ನೀವು ಸಂದೇಶ ಕಳುಹಿಸಬೇಕೆನ್ನುವವರ ಚಾಟ್​ಗೆ ಹೋಗಿ. ಈಗ ಸಂದೇಶ ಬರೆಯಲು ಕೀಬೋರ್ಡ್ ತೆರೆಯಿರಿ. ಹೆಚ್ಚುವರಿ ಕೀಬೋರ್ಡ್​ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್ (Mic) ಸೈನ್ ಇರುತ್ತದೆ. ಅದನ್ನು ಟ್ಯಾಪ್ ಮಾಡಿ. ಆದರೆ, ವಾಟ್ಸ್​ಆಯಪ್​​ನಲ್ಲಿ ವಾಯಿಸ್ ಮೆಸೇಜ್ ಕಳುಹಿಸಲು ಕೂಡ ಮೈಕ್ ನೀಡಲಾಗಿದೆ ಎಂಬುದರ ಮೇಲೆ ಗಮನವಿರಲಿ. ನೀವು ಆ ಮೈಕ್​ನ ಬಳಕೆ ಮಾಡಬೇಡಿ. ಕೀಬೋರ್ಡ್ ನಲ್ಲಿರುವ ಮೈಕ್ ಮಾತ್ರ ನೀವು ಉಪಯೋಗಿಸಬೇಕು.

ಈಗ ನಿಮ್ಮ ಮುಂದೆ ಒಂದು ಮೈಕ್ ಪ್ರಕಟವಾಗಲಿದೆ. ಜೊತೆಗೆ ನಿಮಗೆ ಮಾತನಾಡಲು ಸೂಚನೆ ನೀಡುತ್ತದೆ. ನೀವು ಕಳುಹಿಸಬೇಕೆನ್ನುವ ಸಂದೇಶವನ್ನು ಕೇವಲ ಮಾತನಾಡುವ ಮೂಲಕ ಹೇಳಿ. ನಿಮ್ಮ ಸಂದೇಶ ಪೂರ್ಣಗೊಂಡ ಬಳಿಕ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ. ಇಲ್ಲಿ ವಿಶೇಷ ಎಂದರೆ ಇಂದಿನ ಬಹುತೇಕ ಕೀಬೋರ್ಡ್ ಇಂಗ್ಲಿಷ್ ಭಾಷೆಯ ಜೊತೆಗೆ ಪ್ರಾಂತೀಯ ಭಾಷೆಗಳನ್ನು ಸಹ ಸಮರ್ಥಿಸುತ್ತವೆ. ನೀವು ಮಾತನಾಡಿದ್ದೆಲ್ಲವು ಇಲ್ಲಿ ಟೈಪ್ ಆಗುತ್ತದೆ. ನಂತರ ಸೆಂಡ್ ಬಟನ್ ಒತ್ತಿದರೆ ಆಯಿತು.

OK Google ಮೂಲಕವೂಕಳುಹಿಸಬಹುದು:

ಇನ್ನೂ ವಾಟ್ಸ್​ಆಯಪ್ ಓಪನ್‌ ಮಾಡದಂತೆ ಮೆಸೇಜ್‌ ಸೆಂಡ್‌ ಮಾಡಲು ಗೂಗಲ್‌ ಕೂಡ ಸಹಾಯ ಮಾಡುತ್ತಿದೆ. ಗೂಗಲ್‌ ಫೋಲ್ಡರ್‌ ಅಥವಾ ಆಯಪ್‌ ಡ್ರಾವರ್‌ನಿಂದ ಗೂಗಲ್‌ ಆಯಪ್‌ ಓಪನ್‌ ಮಾಡಿ ಜೋರಾಗಿ ‘OK Google’ ಎಂದು ಹೇಳಿ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಳಕೆದಾರರು ವಾಟ್ಸ್​ಆಯಪ್‌ನಲ್ಲಿ ಲಾಂಗ್‌ ಮೆಸೇಜ್‌ ಟೈಪಿಸುವ ಬದಲು, ಸೆಂಡ್‌ ಮಾಡಬೇಕಾದ ಮೆಸೇಜ್‌ ಅನ್ನು ಹೇಳಿರಿ. ನಂತರ ಗೂಗಲ್‌ ಯಾವ ಮೆಸೇಜ್‌ ಅನ್ನು ಸೆಂಡ್ ಮಾಡಬೇಕು ಎಂದು ಕೇಳುತ್ತದೆ. ಈ ರೀತಿಯಲ್ಲಿ ಟೈಪಿಸುವ ಸಮಸ್ಯೆಯಿಂದ ವಾಟ್ಸ್​ಆಯಪ್ ಮೆಸೇಜ್ ಅನ್ನು ಕಳುಹಿಸಬಹುದು.

About Author

Leave a Reply

Your email address will not be published. Required fields are marked *

You may have missed