ಭೀಕರವಾಗಿ ದಾಳಿ ಮಾಡಿ ಭಯ ಹುಟ್ಟಿಸಿದ್ದ ಕೋತಿ ಕೊನೆಗೂ ಸೆರೆ

0

ಭೋಪಾಲ್: 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿಯನ್ನು  ಕೊನೆಗೂ ಸೆರೆಹಿಡಿಯಲಾಗಿದೆ. ಕೋತಿಯನ್ನು ಹಿಡಿದವರಿಗೆ 21 ಸಾವಿರ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಮಧ್ಯಪ್ರದೇಶದ  ಭೋಪಾಲ್‌ನ  ರಾಜಗಢದಲ್ಲಿ  20ಕ್ಕೂ,

ಹೆಚ್ಚು ಜನರ ಮೇಲೆ ದಾಳಿ ಮಾಡಿ ಕೋತಿಯೊಂದು ಸ್ಥಳೀಯರ ನಿದ್ದೆಗೆಡಿಸಿತ್ತು. ಕೋತಿಯ ಉಪಟಳ ತಾಳಲಾರದೆ ಅದನ್ನು ಸರೆಹಿಡಿಯಲು ಹರಸಾಹಸ ಪಡಲಾಗಿತ್ತು. ಮೋಸ್ಟ್ ವಾಂಟೆಡ್ ಎನಿಸಿಕೊಂಡಿದ್ದ ಕೋತಿಯನ್ನು ಸೆರೆಹಿಡಿದವರಿಗೆ ಬರೋಬ್ಬರಿ 21 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಘೋಷಿಸಲಾಗಿತ್ತು.

ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಉಜ್ಜಯಿನಿಯಿಂದ ತಂಡವನ್ನು ಕರೆಸಿ, ಡ್ರೋನ್ ಮೂಲಕ ಕೋತಿಯನ್ನು ಪತ್ತೆ ಹಚ್ಚಿ, ಅದಕ್ಕೆ ಅರಿವಳಿಕೆ ನೀಡಿ ಕೊನೆಗೂ ಅದನ್ನು ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ವಾಹನಕ್ಕೆ ಕೊಂಡೊಯ್ಯುತ್ತಿದ್ದಂತೆ ಅಲ್ಲಿದ್ದ ಗುಂಪು ‘ಜೈ ಶ್ರೀರಾಮ್, ಜೈ ಬಜರಂಗಬಲಿ’ ಘೋಷಣೆ ಕೂಗಿದ್ದಾರೆ. ಭಾರೀ ದಾಂಧಲೆ ನಡೆಸಿದ್ದ ಕೋತಿ ಕಳೆದ 15 ದಿನಗಳಲ್ಲಿ 8 ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನರ ಮೇಲೆ ಗಂಭೀರ ದಾಳಿ ನಡೆಸಿತ್ತು.

About Author

Leave a Reply

Your email address will not be published. Required fields are marked *

You may have missed