ಟ್ರಾಫಿಕ್ ಬ್ರೇಕ್ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಕ್ರಿಮಿನಲ್ ಕೇಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸುವ ಸವಾರರು ಎಚ್ಚರ ವಹಿಸುವುದು ಸೂಕ್ತವಾಗಿದೆ. ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸಿದ್ರೆ ಬರೀ ದಂಡ ಮಾತ್ರ ಬೀಳಲ್ಲ ಕ್ರಿಮಿನಲ್ ಕೇಸ್ ಕೂಡ ಬೀಳುತ್ತೆ ಎಂದು ಹೇಳಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ್ರೆ ಕೇವಲ ದಂಡ ಹಾಕ್ತಾರೆ ಅಂತ ನೀವು ಅಂದುಕೊಂಡರೆ ಅದು ಕೇವಲ ನಿಮ್ಮ ಊಹೆ ಮಾತ್ರ. ಒನ್ ವೇ ಯಲ್ಲಿ ಬರುವುದು, ರಸ್ತೆಯಲ್ಲಿ ವಾಹನ ಪಾರ್ಕ್ಮಾಡುವುದು ಇದಕ್ಕೆ ಸಂಚಾರಿ ಪೊಲೀಸರು ಕ್ರಿಮಿನಲ್ಕೇಸ್ ಹಾಕುತ್ತಿದ್ದಾರೆ.
ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಸಂಚಾರಿ ಪೊಲೀಸರು, ಎಫ್ ಐ ಆರ್ ದಾಖಲು ಮಾಡುತ್ತಿದ್ದಾರೆ. ಇನ್ನೂ ಒಮ್ಮೆ ಎಫ್ ಐ ಅರ್ ದಾಖಲಾದ್ರೆ ನಿಮ್ಮ ವಾಹನ ಸೀಜ್ ಆಗುತ್ತದೆ. ಸೀಜ್ ಆದ ವಾಹನವನ್ನ ನ್ಯಾಯಾಲಾಯದ ಅನುಮತಿ ಪಡೆದೆ ಬಿಡಿಸಿಕೊಳ್ಳಬೇಕು.
ಹೀಗಾಗಿ ಸಂಚಾರಿ ನಿಯಮಗಳ ಉಲ್ಲಂಘನೆ ದಂಡ ಮಾತ್ರ ಅಲ್ಲ ಕ್ರಿಮಿನಲ್ ಕೇಸ್ ಕೂಡ ಬೀಳಲಿದೆ. ಹೀಗಾಗಿ ಸವಾರರು ಜಾಗರೂಕರಾಗಿರಿ.