ಜುಲೈ 15ರೊಳಗೆ ವಿವಿ ಪುರಂ ಹೈಟೆಕ್ ಫುಡ್‌ಸ್ಟ್ರೀಟ್ ಓಪನ್

0

ಬೆಂಗಳೂರು ;– ನಗರದ ವಿವಿ ಪುರಂ ಹೈಟೆಕ್ ಫುಡ್‌ಸ್ಟ್ರೀಟ್ ಜುಲೈ 15ರೊಳಗೆ ಓಪನ್​ ಆಗಲಿದೆ. ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿವಿ ಪುರಂ ಫುಡ್‌ಸ್ಟ್ರೀಟ್‌ ಅಭಿವೃದ್ಧಿಗೊಳಿಸುತ್ತಿದೆ. ಈ ಕಾಮಗಾರಿಯು ಪೂರ್ಣಗೊಳ್ಳುತ್ತಾ ಬಂದಿದ್ದು, ಜುಲೈ 15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಚಿಕ್ಕಪೇಟೆಯ ಬಿಜೆಪಿ ಶಾಸಕ ಡಾ. ಉದಯ್ ಗರುಡಾಚಾರ್ ವಿವಿ ಪುರಂ ಫುಡ್‌ಸ್ಟ್ರೀಟ್‌ ಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಇದೇ ವೇಳೆ ಸೂಚಿಸಿದರು.

ಬಿಬಿಎಂಪಿ ಕಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ವಿವಿ ಪುರಂ ಫುಡ್‌ಸ್ಟ್ರೀಟ್‌ ಅಭಿವೃದ್ಧಿ ಮಾಡುತ್ತಿದೆ. ನವೀಕರಣಗೊಂಡ ವಿವಿ ಪುರಂ ಫುಡ್‌ಸ್ಟ್ರೀಟ್‌ ಯಾವಾಗ ಓಪನ್ ಆಗಲಿದೆ? ಎಂದು ಜನರು ಸಹ ಕಾದು ಕುಳಿತಿದ್ದಾರೆ.

About Author

Leave a Reply

Your email address will not be published. Required fields are marked *

You may have missed