ಬೆಂಗಳೂರಲ್ಲಿ ಹೋಂಡ ಕಂಪನಿ ಹೆಸ್ರಲ್ಲಿ ಗ್ರಾಹಕರಿಗೆ ಟೋಪಿ

0

ಬೆಂಗಳೂರು: ಪ್ರತಿಷ್ಠಿತ ಹೋಂಡಾ ಕಂಪನಿ ಟೂವೀಲ್ಹರ್ ಗಳ ಬಿಡಿ ಭಾಗಗಳನ್ನ ನಕಲು ಮಾಡ್ತಿದ್ದ ಫ್ಯಾಕ್ಟರಿ ಮೇಲೆ ಬ್ಯಾಡರಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಹೋಂಡಾ ಕಂಪನಿ ಹೆಸ್ರಲ್ಲಿದ್ದ ಸೇಫ್ಟಿ ಗಾಡ್, ಪ್ಯಾಡ್ ಗ್ರಿಪ್ಪರ್ ಸೇರಿದಂತೆ ಹಲವು ಬಿಡಿ ಭಾಗಗಳು ಪತ್ತೆಯಾಗಿವೆ.

ಲಕ್ಷ ಲಕ್ಷ ಕೊಟ್ಟು ಟೂವೀಲರ್ ಖರೀದಿ ಮಾಡೋ ಗ್ರಾಹರಕರ ವಾಹನಗಳಿಗೆ ಎಕ್ಸ್ಟ್ರಾ ಫಿಟ್ಟಿಂಗ್ ಎಟಂಗಳು ಇವಾಗಿವೆ. ಕಂಪನಿ ಎಂಆರ್ ಪಿ ದರದಲ್ಲೆ ಗ್ರಾಹಕರಿಂದ ಹಣ ಪಡೆದು ಒಂದು ಕಡೆ ಗ್ರಾಹಕರಿಗೆ ಇನ್ನೋಂದು ಕಡೆ ಹೋಂಡಾ ಕಂಪನಿಗೆ ವಂಚಕರು ವಂಚಿಸಿರೋದು ಬೆಳಕಿಗೆ ಬಂದಿದೆ.

ಬ್ಯಾಡರಹಳ್ಳಿ ಠಾಣವ್ಯಾಪ್ತಿಯ ತಿಗಳರಪಾಳ್ಯದ ಡಾಲ್ ಫಿನ್ ಟ್ರೇಡರ್ ಕಂಪನಿಯಲ್ಲಿ ಈ ನಕಲಿ ಬಿಡಿಭಾಗಗಳ ತಯಾರಾಗ್ತಿತ್ತು. ಈ ಬಗ್ಗೆ ಹೋಂಡಾ ಕಂಪನಿ ಅಧಿಕಾರಿಗಳೆ ಮಾಹಿತಿ ಕಲೆ ಹಾಕಿ ಪೊಲೀಸ್ರಿಗೆ ಮಾಹಿತಿ ನೀಡಿದ್ರು.‌ಸದ್ಯ ಮಾಹಿತಿ ಅನ್ವಯ ಡಾಲ್ ಫಿಮ್ ಟ್ರೇಡರ್ಸ್ ಮೇಲೆ ನಡೆಸಿ ಸುಮಾರು 1.5ಲಕ್ಷದ ಹೋಂಡಾ ಕಂಪನಿ ಹೆಸರಿನ ಬಿಡಿಭಾಗಗಳನ್ನ ಸೀಜ್ ಮಾಡಿದ್ದ ಫ್ಯಾಕ್ಟರಿ ಮಾಲಿಕ ರಮೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

About Author

Leave a Reply

Your email address will not be published. Required fields are marked *

You may have missed