ಮಿಸ್​ ಮಾಡ್ಬೇಡಿ.. ಭರ್ಜರಿಯಾಗಿದೆ ಶ್ರೀಮನ್ನಾರಾಯಣನ ಎಂಟ್ರಿ‌ಸಾಂಗ್..!

1 Star2 Stars3 Stars4 Stars5 Stars (No Ratings Yet)
Loading...

ಸಿಂಪಲ್​ ಸ್ಟಾರ್’​ ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’.. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮತ್ತೊಂದು ಮಾಸ್ಟರ್ ಪೀಸ್​ ಆಗೋಕೆ ಅಂತಲೇ ಸೃಷ್ಟಿಯಾಗಿರೋ ಸಿನಿಮಾ. ಈಗಾಗಲೇ ‘ಶ್ರೀಮನ್ನಾರಾಯಣ’ನ ಟೀಸರ್ ಜನರ ಮೆಚ್ಚುಗೆ ಗಳಿಸಿದೆ. ಇದೊಂದು ಫ್ಯಾಂಟಸಿ ಅಡ್ವೆಂಚರ್ ಕಾಮಿಡಿ ಚಿತ್ರವಾಗಿದ್ರೂ, ನವರಸಗಳು ತುಂಬಿರೋ ಪರ್ಫೆಕ್ಟ್​ ಎಂಟರ್ಟೈನರ್ ಸಿನಿಮಾ. ಟೀಸರ್​, ಟ್ರೈಲರ್​ನಿಂದಲೇ ಅದಾಗಲೇ ಸಿನಿರಸಿಕರ ಎದೆಯಲ್ಲಿ ಕಿಚ್ಚು ಹಚ್ಚಿದೆ. ಇದೀಗ ಹಾಡಿನಿಂದ​ ಹ್ಯಾಂಡ್ಸಪ್​ ಅಂತಾ ಗುಂಡಿಗೆಗೆ ಗುಂಡು ಹೊಡೆಯೋಕೆ ಬಂದಿದೆ.

ವರ್ಕೌಟ್ ಆಯ್ತು ಸೂಪರ್ ಕಾಂಬೊ..!

ರಕ್ಷಿತ್ ಶೆಟ್ಟಿ- ವಿಜಯ್ ಪ್ರಕಾಶ್​- ಅಜನೀಶ್​ ಲೋಕನಾಥ್​ ಮೂವರದ್ದು ಸೆನ್ಸೇಷನಲ್​ ಕಾಂಬಿನೇಷಲ್​. ಮೂವರು ಒಟ್ಟಿಗೆ ಬಂದ್ರು ಅಂದ್ಮೇಲೆ ಸಂಥಿಂಗ್ ಸ್ಪೆಷಲ್​ ಇರುತ್ತೆ. ಈ ಮಾತನ್ನು ‘ಅವನೇ ಶ್ರೀ ಮನ್ನಾರಾಯಣ’ ಫಸ್ಟ್​ ಹಾಡೇ ನಿಜವಾಗಿಸಿದೆ. ‘ಹ್ಯಾಂಡ್ಸಪ್​…’ ಹಾಡು ತುಂಬಾನೇ ಕ್ಲಾಸಿಯಾಗಿ ಮೂಡಿಬಂದಿದೆ. ಹಾಡಿನ ಜೊತೆಗೆ ಕಥೆಯ ಒಂದಷ್ಟು ಎಳೆಯನ್ನು ‘ಹ್ಯಾಂಡ್ಸಪ್’ ಬಿಚ್ಚಿಡಲಿದೆ. ಈಗಾಗಲೇ ಹಾಡಿಗೆ ಒಂದೊಳ್ಳೆ ರಿವ್ಯೂವ್ ಸಿಗೋಕೆ ಶುರುವಾಗಿದೆ. ‘ಕನ್ನಡ ಸಾಹಿತ್ಯಕ್ಕೆ ಯಾವತ್ತೂ ಸೋಲಿಲ್ಲ! ಒಳ್ಳೆಯ ಸಾಹಿತ್ಯ. ಹೌದು ಇದು ಚರಿತ್ರೆ ಸೃಷ್ಟಿಸೊ ಅವತಾರ’. ಅಂತಾ ಜನರ ಕಾಮೆಂಟ್ಸ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಹಾಡಿನಲ್ಲೂ ‘ಅವನೇ ಶ್ರೀಮನ್ನಾರಾಯಣ’ ಜಪ ಮುಂದುವರೆಸುವಂತೆ ಮಾಡಿದೆ ರಕ್ಷಿತ್​ ಅಂಡ್​ ಟೀಂ.

Add Comment