ರಾಜಸ್ಥಾನ : ಅಶೋಕ್ ಗೆಹ್ಲೋಟ್ ಸರ್ಕಾರದಿಂದ ವಿಶ್ವಾಸಮತ ಸಾಬೀತು

  1. ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ಬಿಕ್ಕಟ್ಟು ಶಮನವಾದ ಹಿನ್ನೆಲೆಯಲ್ಲಿ ಇಂದು ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿದೆ.

ರಾಜಸ್ಥಾನದ ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಳಿಂದ ವಜಾಗೊಂಡಿದ್ದ ಭಿನ್ನಮತೀಯ ಶಾಸಕರ ನಾಯಕ ಸಚಿನ್ ಪೈಲಟ್ ಅವರು ಕೊನೆಗೂ ನವದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮನವೊಲಿಕೆಯ ಪರಿಣಾಮ ತಮ್ಮ ಬೆಂಬಲಿಗರಾಗಿದ್ದ 18 ಭಿನ್ನಮತೀಯ ಶಾಸಕರ ಬೆಂಬಲವನ್ನು ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಮುಂದುವರೆಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಇಂದು ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತದಿಂದ ವಿಶ್ವಾಸಮತ ಗೆದ್ದಿತು.

ಕೆ ಟಿವಿ ನ್ಯೂಸ್ ಜೈಪುರ

hi

Add Comment