ಸಿಬಿಐ ಅಧಿಕಾರಿಯಾದ ಬಹುಭಾಷಾ ನಟ ಫಹಾದ್ ಫಾಸಿಲ್

0

ಲಯಾಳಂ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಫಹಾದ್ ಫಾಸಿಲ್ ಇದೀಗ ಸಿಬಿಐ ಅಧಿಕಾರಿಯಾಗಿದ್ದಾರೆ. ಕನ್ನಡದ ಬಘೀರ ಸಿನಿಮಾದಲ್ಲಿ ಅವರು ಇಂಥದ್ದೊಂದು ಪಾತ್ರ ನಿರ್ವಹಿಸಲಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಈ ಚಿತ್ರವು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದ್ದು, ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿಸಿದೆ.

 

ಬಘೀರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದ ಶ್ರೀಮುರಳಿ, ಆನಂತರ ಆಸ್ಪತ್ರೆ ಸೇರಿ ಗಾಯಕ್ಕೆ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಮರಳಲಿದ್ದು, ಆಗ ಫಹಾದ್ ಫಾಸಿಲ್ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕಾಲಿವುಡ್ ವಿಕ್ರಮ್ ಸಿನಿಮಾ ಗೆಲುವಿನ ನಂತರ ಫಹಾದ್ ಗೆ ಭಾರೀ ಡಿಮಾಂಡ್ ಕ್ರಿಯೇಟ್ ಆಗಿದೆ.

ಅಂದಹಾಗೆ ಬಘೀರ್ ಸಿನಿಮಾವನ್ನು ಡಾ.ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಲಕ್ಕಿ ಚಿತ್ರದ ನಂತರ ಸೂರಿ ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿ ಪೊಲೀಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ಫಹಾದ್ ಸಿಬಿಐ ಅಧಿಕಾರಿಯಾಗಿ ಶ್ರೀಮುರಳಿಗೆ ಸಾಥ್ ನೀಡಲಿದ್ದಾರೆ. ಮಂಗಳೂರು ಸೇರಿದಂತೆ ಹಲವು ಕಡೆ ಈಗಾಗಲೇ ಹಲವು ಹಂತದ ಚಿತ್ರೀಕರಣ ನಡೆದಿದೆ. ಫೆಬ್ರವರಿಯಿಂದ ಮುಂದಿನ ಹಂತದ ಚಿತ್ರೀಕರಣ ಎನ್ನಲಾಗುತ್ತಿದೆ.

About Author

Leave a Reply

Your email address will not be published. Required fields are marked *

You may have missed