ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸರ್ಕಾರ ಹೈಡ್ರಾಮಾ ನಡೆಸುತ್ತಿದೆ: ಹೆಚ್.ವಿಶ್ವನಾಥ್

0

ಬೆಂಗಳೂರು: ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಸರ್ಕಾರ ಹೈಡ್ರಾಮಾ ನಡೆಸುತ್ತಿದೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಮಾತನಾಡಿದ ಅವರು, ಲಂಚ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮಾಡಾಳ್​ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನೀಡಿದೆ.

ಇಲ್ಲಿ ಯಾವುದೇ ಸರ್ಕಾರದ ವಕೀಲರ ನೇಮಕವಾಗಿಲ್ಲ. ಈ ಪ್ರಕರಣದ ತನಿಖಾ ತಂಡದಲ್ಲಿದ್ದ ಲೋಕಾಯುಕ್ತದ ಇಬ್ಬರು ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಹೈಕೋರ್ಟ್‌ ನೀಡಿರುವ ಜಾಮೀನು ವಿಚಾರವಾಗಿ ನಮ್ಮ ಬೆಂಗಳೂರಿನ ವಕೀಲರ ಸಂಘ ಸುಪ್ರೀಂ ಕೋರ್ಟ್​ಗೆ ಪತ್ರ ಬರೆದಿರುವುದನ್ನು ಗಮನಿಸಬೇಕು.

ನಾನು ಕಳೆದ ಐವತ್ತು ವರ್ಷಗಳಿಂದ ನಾಡಿನ ರಾಜಕಾರಣ ಹಾಗೂ ಆಡಳಿತದ ಅನುಭವ ಹೊಂದಿದ್ದೇನೆ. ಒಬ್ಬ ಶಾಸಕನ ಮನೆಯಲ್ಲಿ ಇಷ್ಟು ಹಣ ಸಿಗುತ್ತದೆ ಎಂದರೆ ಯಾವ ಪರಿ ಅವ್ಯವಹಾರ ನಡೆಯುತ್ತಿದೆ?, ರಾಜ್ಯ ರಾಜಕಾರಣ ಎತ್ತ ಕಡೆ ಸಾಗುತ್ತಿದೆ?” ಎಂದು ಹೆಚ್.ವಿಶ್ವನಾಥ್​ ಕಳವಳ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ರಾಜಕಾರಣ ನಡೆಸುತ್ತಿರುವವರು ಪ್ರಧಾನಿ ಮೋದಿ ಅವರ ವಿರೋಧಿಗಳು. ನರೇಂದ್ರ ಮೋದಿ ಪಾಪ ಭ್ರಷ್ಟಾಚಾರರಹಿತ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ. ಬಿಜೆಪಿಯವರು ಕೆಲವರು ಪ್ರಧಾನಿ ಮೋದಿ ಅವರ ವಿರೋಧಿಗಳಾಗಿದ್ದಾರೆ. ಫೋನ್​ ಪೇ ಹೋಗಿ ಅಡಿಕೆ ಮರ ಪೇ ಆಗಿದೆ. ಬಿಜೆಪಿ ಸರ್ಕಾರದಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ ಅವರಂತಹ ತಳಿ ಬೇಕಾ” ಎಂದು ವಿಶ್ವನಾಥ್‌ ಕೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed