ಅದ್ದೂರಿಯಾಗಿ ನೆರವೇರಿದ ಶ್ರೀಗಾಯಿತ್ರಿ ದೇವಿಯ ಚಿನ್ನದ ರಥೋತ್ಸವ

0

ಕೆಆರ್ ಪುರ :ಬೆಂಗಳೂರಿನ ಕೆಆರ್‌ಪುರ ಸಮೀಪದ ಬಸವನಪುರ ರಸ್ತೆಯ ಗಾಯಿತ್ರಿ ಬಡಾವಣೆಯಲ್ಲಿ ದೇವಪುರಿ ಕ್ಷೇತ್ರ ಪಂಚಮುಖಿ ಗಾಯಿತ್ರಿ ಅಮ್ಮನವರ ಚಿನ್ನದ ರಥೋತ್ಸವ ಅದ್ಧೂರಿಯಾಗಿ ಜರುಗಿತು

ಗಾಯಿತ್ರಿ ಅಮ್ಮನವರ ರಥೋತ್ಸವದ ಕಾರ್ಯಕ್ರಮ 9 ದಿನಗಳ ಕಾಲ ಜರುಗಿದ್ದು , ಕಳೆದ ಎರಡು ವರ್ಷಗಳಿಂದ ಚಿನ್ನದ ರಥದಲ್ಲಿ ಅಮ್ಮನವರ ವಿಗ್ರಹವನ್ನ ಇಟ್ಟು, ಡೊಳ್ಳು ,ವಾದ್ಯ ಸಮೇತ ಅದ್ದೂರಿ ಮೆರವಣಿಗೆ ಮಾಡಲಾಗಿದ್ದು , ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

 

ಬ್ರಹ್ಮ ರಥೋತ್ಸವ ಅಂಗವಾಗಿ ಸ್ಮರ್ಣ ರಥೋತ್ಸವ ಹಮ್ಮಿಕೊಂಡಿದ್ದು ಗಾಯಿತ್ರಿ ಬಡಾವಣೆ, ಬಸವನಪುರ, ಕೆಆರ್‌ಪುರ, ದೇವಸಂದ್ರ, ಅಯ್ಯಪ್ಪನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಗ್ರಾಮದೇವತೆಯಂತೆ ನೆಲೆಸಿರುವ , ಈ ದೇವಿಯ ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಇನ್ನೂ ಶ್ರದ್ಧಾಭಕ್ತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರು ದಾರಿಯುದ್ದಕ್ಕೂ ರಂಗೋಲಿ ಮೂಲಕ ಸ್ವಾಗತಿಸಿದರು.

ಗಾಯಿತ್ರಿ ಬಡಾವಣೆಯ ಭಕ್ತರ ಪ್ರಕಾರ, ಈ ದೇವಿ ಕೋರಿಕೊಂಡದ್ದನ್ನೂ ಈಡೇರಿಸುವ ತಾಯಿ. ಇಲ್ಲಿ ನೆಲೆಸಿದ ಬಳಿಕ ಇಲ್ಲಿನ ಭಕ್ತರ ಆರೋಗ್ಯ, ಆದಾಯ ಸೇರಿದಂತೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಕಂಡಿದ್ದಾರೆ. ಕಳೆದ ೨೫ ವರ್ಷಗಳಿಂದ ಭಕ್ತರು ಈ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾ ನಂಬಿಕೆಯಿಟ್ಟು ಪ್ರತಿ ವರ್ಷ ಉತ್ಸವ ಮಾಡುತ್ತಿದ್ದಾರೆ.

ಇದೇ ವೇಳೆ ಗಾಯಿತ್ರಿ ದೇವಸ್ಥಾನದ ಅರ್ಚಕರಾದ ಶ್ರೀಕಂಠರವರು ಮಾತನಾಡಿ, ದೇವರ ಮೇಲಿನ ನಂಬಿಕೆಯಿಂದ ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಾಯಿತ್ರಿ ಅಮ್ಮನವರು ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ನಂಬಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed