ಪೊಲೀಸರು ಅಭಿನಯಾ ಅವರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ತಲೆಮರೆಸಿಕೊಂಡಿದ್ದು, ಈಗ ಲುಕ್​ಔಟ್​ ನೋಟಿಸ್​ ಜಾರಿ ಮಾಡಲಾಗಿದೆ.

ಅತ್ತಿಗೆಗೆ ವರದಕ್ಷಿಣಿ ಕಿರುಕುಳ (Dowry Case) ನೀಡಿದ ಪ್ರಕರಣದಲ್ಲಿ ಖ್ಯಾತ ನಟಿ ಅಭಿನಯಾ (Abhinaya) ಅವರಿಗೆ ಇತ್ತೀಚೆಗೆ ಜೈಲು ಶಿಕ್ಷೆ ಪ್ರಕಟ ಆಗಿತ್ತು.

 

ಆ ಬಳಿಕ ಅವರು ತಲೆ ಮರೆಸಿಕೊಂಡಿದ್ದಾರೆ.ಅಭಿನಯಾಅವರ ಪತ್ತೆಗಾಗಿ ಬೆಂಗಳೂರಿನ ಚಂದ್ರಾ ಲೇಔಟ್​ ಪೊಲೀಸರು ಬಲೆ ಬೀಸಿದ್ದಾರೆ. ಅಭಿನಯಾ ಜೊತೆ ಅವರ ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜು ಅವರಿಗಾಗಿಯೂ ಹುಡುಕಾಟ ನಡೆದಿದೆ. ಅಪರಾಧಿಗಳ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದು, ಲುಕ್​ಔಟ್​ ನೋಟಿಸ್​ (lookout notice) ಜಾರಿ ಮಾಡಿದ್ದಾರೆ. ಪೊಲೀಸರು ಈ ಮೂವರನ್ನೂ ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ತಲೆಮರೆಸಿಕೊಂಡಿದ್ದಾರೆ.

ನಟಿ ಅಭಿನಯಾ ಕೇಸ್​ ಹಿನ್ನಲೆ:

ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ಈ ಹಿಂದೆ ದೂರು ನೀಡಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತಮಗೆ ವರದಕ್ಷಿಣಿ ಕಿರುಕುಳ ನೀಡಲಾಗಿದೆ ಮತ್ತು ಕೌಟುಂಬಿಕ ದೌರ್ಜನ್ಯ ನಡೆಸಲಾಗಿದೆ ಎಂದು ಲಕ್ಷ್ಮಿದೇವಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಅಭಿನಯಾ ಅವರ ತಾಯಿ ಜಯಮ್ಮಗೆ 5 ವರ್ಷ ಜೈಲು ಶಿಕ್ಷೆ ನೀಡಿ, ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿತ್ತು. ಅಭಿನಯಾ ಹಾಗೂ ಅವರ ಸಹೋದರ ಚೆಲುವರಾಜ್​ಗೆ 2 ವರ್ಷ ಶಿಕ್ಷೆ ನೀಡಲಾಗಿತ್ತು.

2 ದಶಕಗಳ ಹಳೇ ಪ್ರಕರಣ:

ಅಭಿನಯಾ ಅವರ ಅತ್ತಿಗೆ ಲಕ್ಷ್ಮಿದೇವಿ ಅವರು 2002ರಲ್ಲಿಯೇ ಈ ಕೇಸ್​ ದಾಖಲಿಸಿದ್ದರು. 1998ರಲ್ಲಿ ಅಭಿನಯಾ ಸಹೋದರ ಶ್ರೀನಿವಾಸ್​ ಜೊತೆ ಲಕ್ಷ್ಮಿದೇವಿ ವಿವಾಹ ನೆರವೇರಿತ್ತು. ಮದುವೆ ಬಳಿಕ ಶ್ರೀನಿವಾಸ್​ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಂದ್ರಾ ಲೇಔಟ್​ನಲ್ಲಿ ಲಕ್ಷ್ಮಿದೇವಿ ದೂರು ದಾಖಲಿಸಿದ್ದರು.’ಹೆರಿಗೆ ಬಳಿಕ ಪತಿ ಮನೆಯವರು ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪೋಷಕರ ಮನೆಯಲ್ಲಿ ಉಳಿದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಿದರು. ಕೊಲೆ ಬೆದರಿಕೆಯನ್ನೂ ಹಾಕಿದರು’ ಎಂದು ದೂರಿನಲ್ಲಿ ಲಕ್ಷ್ಮಿದೇವಿ ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ಡಿಸೆಂಬರ್​ನಲ್ಲಿ ಹೈಕೋರ್ಟ್​ ತೀರ್ಪು ನೀಡಿದ್ದು ಅಭಿನಯಾ, ಅವರ ತಾಯಿ ಮತ್ತು ಸಹೋದರನಿಗೆ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಈ ಮೂವರೂ ತಲೆಮರೆಸಿಕೊಂಡಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಅಭಿನಯಾ ಅವರು ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಚೊಚ್ಚಲ ಸಿನಿಮಾ ‘ಅನುಭವ’ ಮೂಲಕ ಅವರು ಹೆಚ್ಚು ಗುರುತಿಸಿಕೊಂಡರು. ಆದರೆ ನಂತರ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆಮಾತಾದರು. ಆದರೆ ಈಗ ಅಪರಾಧಿ ಸ್ಥಾನದಲ್ಲಿದ್ದಾರೆ.

 

About Author

Leave a Reply

Your email address will not be published. Required fields are marked *

You may have missed