5ನೇ & 8ನೇ ತರಗತಿ ಬೋರ್ಡ್ ಪರೀಕ್ಷೆಯ ಹೊಸ ವೇಳಾಪಟ್ಟಿ ಪ್ರಕಟ..!

0

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಶಿಕ್ಷಣ ಇಲಾಖೆ ವತಿಯಿಂದ 5 ಮತ್ತು 8ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಮಾರ್ಚ್ 27 ರಿಂದ ಏ. 1 ರವರೆಗೆ ಪರೀಕ್ಷೆಗಳು ನಡೆಯಲಿವೆ.

ಐದನೇ ತರಗತಿ ಮಕ್ಕಳಿಗೆ ಮಾರ್ಚ್ 27 ರಿಂದ 30 ರವರೆಗೆ, 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 1ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಆಯಾ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಪರಿಗಣಿಸಲಾಗಿದೆ.

ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ. ಮೌಲ್ಯಾಂಕನದಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆಲ ತಿಂಗಳು ವಿಶೇಷ ತರಗತಿ ನಡೆಸಿ ಅವರ ಕಲಿಕಾ ಮಟ್ಟ ಸುಧಾರಿಸಿ ಮುಂದಿನ ತರಗತಿಗೆ ಪ್ರವೇಶ ಕಲ್ಪಿಸಲಾಗುವುದು.

5ನೇತರಗತಿಬೋರ್ಡ್ಪರೀಕ್ಷೆವೇಳಾಪಟ್ಟಿ

ಮಾರ್ಚ್ 27 ಪ್ರಥಮ ಭಾಷೆ

ಮಾರ್ಚ್ 28 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಮಾರ್ಚ್ 29 ಪರಿಸರ ಅಧ್ಯಯನ

ಮಾರ್ಚ್ 30 ಗಣಿತ

8ನೇತರಗತಿಬೋರ್ಡ್ಪರೀಕ್ಷೆವೇಳಾಪಟ್ಟಿ

ಮಾರ್ಚ್ 27 ಪ್ರಥಮ ಭಾಷೆ

ಮಾರ್ಚ್ 28 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಮಾರ್ಚ್ 29 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,

ಮಾರ್ಚ್ 30 ಗಣಿತ

ಮಾರ್ಚ್ 31 ವಿಜ್ಞಾನ

ಏಪ್ರಿಲ್ 1 ಸಮಾಜ ವಿಜ್ಞಾನ

About Author

Leave a Reply

Your email address will not be published. Required fields are marked *

You may have missed