ಎರಡು ರಾಜ್ಯಗಳ ಗಲಾಟೆ: ಕರೆಂಟ್ ಇಲ್ಲದೇ ಪರದಾಡುತ್ತಿರುವ ಗ್ರಾಮ

0

ಗೋಲಾಘಾಟ್-ವೋಖಾ ಗಡಿಯಲ್ಲಿರುವ ಗ್ರಾಮವು ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅದರ ಬಗ್ಗೆ ಈಗ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಈ ಸೌಲಭ್ಯದಿಂದ ವಂಚಿತವಾಗಲು ಕಾರಣವೇನೆಂದರೆ, ಇದು ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವೆ ಇದ್ದು, ಎರಡೂ ರಾಜ್ಯಗಳ ರಾಜಕೀಯದಿಂದ ಜನರು ಜರ್ಜರಿತರಾಗಿದ್ದಾರೆ.

ಎರಡೂ ರಾಜ್ಯಗಳು ಭೂಮಿಯ ಮೇಲೆ ಮಾಲೀಕತ್ವಕ್ಕೆ ಗುದ್ದಾಡುತ್ತಿವೆ.ಎರಡು ರಾಜ್ಯಗಳನ್ನು ಸಂಪರ್ಕಿಸುವ ಕೊನೆಯ ರಸ್ತೆಯು ಇದಾಗಿದ್ದು, ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಈ ಎರಡು ನೆರೆಹೊರೆಯವರ ನಡುವಿನ ಗಡಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಗ್ರಾಮವು ನಾಗಾಲ್ಯಾಂಡ್ ಸೀಡ್ ಫಾರ್ಮ್ ಆವರಣದೊಳಗೆ ಇದೆ, ಇದು ಅಸ್ಸಾಂನ ಗೋಲಾಘಾಟ್ ಜಿಲ್ಲೆ ಮತ್ತು ನಾಗಾಲ್ಯಾಂಡ್‌ಗೆ ಒಳಪಟ್ಟಿದೆ ಎಂದು ಹೇಳುವ ಮೂಲಕ ಅಸ್ಸಾಂನೊಂದಿಗೆ ಮೆರಾಪಾನಿಯಲ್ಲಿ ವಿವಾದಿತ ಪ್ರದೇಶದಲ್ಲಿ ನೆಲೆಗೊಂಡಿದೆ, ಇದು ವೋಖಾ ಗಡಿ ಭಾಗವೆಂದು ಹೇಳಲಾಗಿದೆ. “ನಾವು ಎರಡು ರಾಜ್ಯಗಳ ನಡುವಿನ ನಿಯಂತ್ರಣಕ್ಕಾಗಿ ನಜ್ಜುಗುಜ್ಜಾಗಿದ್ದೇವೆ. ನಮಗೆ ಯಾವುದೇ ವಿದ್ಯುತ್ ಸಂಪರ್ಕಗಳು ಇಲ್ಲ. ರಸ್ತೆಗಳು ಇಲ್ಲ. ಕುಡಿಯುವ ನೀರು ಇಲ್ಲ” ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಎರಡೂ ಸರ್ಕಾರಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಲಿಲ್ಲ ಎನ್ನುತ್ತಿದ್ದಾರೆ.

About Author

Leave a Reply

Your email address will not be published. Required fields are marked *

You may have missed