ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಹೊಸ ವೇದಿಕೆ: ಕಪಿಲ್ ಸಿಬಲ್

0

ವದೆಹಲಿ: ನಾಗರಿಕರ ವಿರುದ್ಧ ಕೆಲಸ ಮಾಡುವ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದು ಆರೋಪಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು, ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಇನ್ಸಾಫ್ ಎಂಬ ಹೊಸ ವೇದಿಕೆ ಘೋಷಿಸಿದ್ದಾರೆ.ಮಾರ್ಚ್ 11 ರಂದು ಜಂತರ್ ಮಂತರ್‌ನಲ್ಲಿ ಹೊಸ ವೇದಿಕೆಯ ಸಾರ್ವಜನಿಕ ಸಭೆ ನಡೆಸುವುದಾಗಿ ಕಪಿಲ್ ಸಿಬಲ್, ಇದು ದೇಶದ ಹೊಸ ದೃಷ್ಟಿಕೋನವನ್ನು ಮುಂದಿಡಲಿದೆ ಎಂದಿದ್ದಾರೆ.

 

ಮಾರ್ಚ್ 11 ರಂದು ಜಂತರ್ ಮಂತರ್‌ನಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಮತ್ತು ಸಾಮಾನ್ಯ ಜನರು ಸೇರಿದಂತೆ ಎಲ್ಲರಿಗೂ ಭಾಗವಹಿಸಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.”ಈ ವೇದಿಕೆ ಭಾರತದ ಹೊಸ ದೃಷ್ಟಿಕೋನ, ಸಕಾರಾತ್ಮಕ ಕಾರ್ಯಸೂಚಿಯನ್ನು ನೀಡುತ್ತದೆ. ಈ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕಾಗಿ ಅಲ್ಲ. ಅವರನ್ನು ಸುಧಾರಿಸುವುದಕ್ಕಾಗಿ” ಎಂದು ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed