ಬೆಂಗಳೂರಿನಲ್ಲಿ ಒಬ್ಬ ಸೈಕೋ ಸಾಫ್ಟ್‌ವೇರ್ ಗಂಡ..!

0

ಬೆಂಗಳೂರು: ಬೆಂಗಳೂರಿನ ಆರ್​ಆರ್​ ನಗರದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ತನ್ನ ಹೆಂಡತಿ ತಲೆಯನ್ನು ಗೋಡೆಗೆ ಹೊಡೆದು ಕೊಲೆಗೆ ಯತ್ನಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜರುಗಿದೆ. ಸದ್ಯ ಗಂಡ-ಹೆಂಡತಿ ಇಬ್ಬರೂ ಆಸ್ಪತ್ರೆ ಸೇರಿದ್ದು ಪೋಷಕರ ಬಳಿ ಇರಲು ಮಗ ಭಯಪಡುವಂತಾಗಿದೆ.

ಅಪ್ಪ-ಅಮ್ಮನ ಜಗಳ ನೋಡಿದ 12 ವರ್ಷದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ತುಮಕೂರು ನಿವಾಸಿಯಾದ ಹರ್ಷ 10 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಹರ್ಷ ಹಾಗೂ ಸುಧಾರಾಣಿ ಇಬ್ಬರೂ ಸಾಫ್ಟ್‌ವೇರ್ ಇಂಜನಿಯರ್​ಗಳಾಗಿದ್ದು ದಂಪತಿಗೆ 12 ವರ್ಷದ ಮಗ ಇದ್ದಾನೆ. ಇಬ್ಬರಿಗೂ ಕೈ ತುಂಬ ಸಂಬಳವಿತ್ತು. ಸುಖ, ಸಂತೋಷದಲ್ಲೇ ಸಂಸಾರ ಸಾಗುತ್ತಿತ್ತು. ಆದ್ರೆ ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ್ದು, ಸಾಕಷ್ಟು ಹಣ ಬಂದಿತ್ತು. ಹಣ ಬಂದದ್ದೇ ಟೆಕ್ಕಿ ಹರ್ಷ ಸಂಪೂರ್ಣವಾಗಿ ಬದಲಾಗಿದ್ದ.

ಇದ್ದಕ್ಕಿದ್ದಂತೆ ಕೋಟಿ ಕೋಟಿ ಹಣ ನೋಡಿದ ಹರ್ಷ ಲಕ್ಷ ಬರುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲೇ ಸೆಟಲ್ ಆಗಿದ್ದ. ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುತ್ತಿದ್ದ. ಪ್ರತಿ ದಿನ ಕುಡಿದು ಬಂದು ಹೆಂಡತಿಗೆ ಮಾನಸಿಕ ಹಿಂಸೆ ನೀಡೋದು, ಹೊಡೆಯೋದು ಮಾಡ್ತಿದ್ದ. ಚನ್ನಾಗಿ ಮಗನ ಜೊತೆ ಇರುತ್ತಿದ್ದ ಹರ್ಷ ಕುಡಿದ ತಕ್ಷಣ ಸೈಕೊ ರೀತಿ ವರ್ತಿಸುತ್ತಿದ್ದನಂತೆ. ಅದೇ ರೀತಿ ಮಾರ್ಚ್ 17 ರಂದು ಕೂಡ ಹರ್ಷ ಕುಡಿದು ಬಂದಿದ್ದ. ಆಗ ಹೆಂಡತಿ ಸುಧಾರಾಣಿ ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ ಅಂದಿದ್ದಕ್ಕೆ ಆಕೆಯ ಜೊತೆ ಜಗಳವಾಡಿ ತಲೆಯನ್ನು ಗೋಡೆಗೆ ಹೊಡೆದು‌ ಕೊಲೆಗೆ ಯತ್ನಿಸಿ ನಂತರ ತಾನೂ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮರೆಯಲ್ಲಿ ನಿಂತು ಅಪ್ಪ-ಅಮ್ಮನ ಜಗಳ ನೋಡುತ್ತಿದ್ದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ದಂಪತಿ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಸುಧಾರಣಿ ಸಹೋದರನ ದೂರಿನ ಅನ್ವಯ ಆರ್​ಆರ್ ನಗರದಲ್ಲಿ ಎಫ್‌ಐಆರ್ ದಾಖಲಾಗಿದೆ.

About Author

Leave a Reply

Your email address will not be published. Required fields are marked *

You may have missed