Adhani..ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದ ಅದಾನಿ

0

ವದೆಹಲಿ: ಹಿಂಡೆನ್‌ಬರ್ಗ್ (Hindenburg) ವರದಿ ಬಳಿಕ ಅದಾನಿ ಸಾಮ್ರಾಜ್ಯ ಪತನದತ್ತ ಮುಖ ಮಾಡಿದ್ದು, ಫೋರ್ಬ್ಸ್ (Forbes) ಶ್ರೀಮಂತರ ಪಟ್ಟಿಯಲ್ಲಿ ಗೌತಮ್‌ ಅದಾನಿ (Gautam Adani) 3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿಗಳ ನಿರಂತರ ಕುಸಿತದ ಪರಿಣಾಮದಿಂದಾಗಿ ಅವರು ದೊಡ್ಡ ಸಂಕಷ್ಟ ಎದುರಿಸುತ್ತಿದ್ದಾರೆ.

ಜನವರಿ 24 ರಂದು ಹಿಂಡೆನ್‌ಬರ್ಗ್ ವರದಿ ಪ್ರಕಟಿಸುವ ಮುನ್ನ ಗೌತಮ್ ಅದಾನಿ ಒಟ್ಟು ಮೌಲ್ಯ 119 ಶತಕೋಟಿ ಡಾಲರ್ ಆಗಿತ್ತು. ವರದಿ ಬಂದು ಒಂದು ತಿಂಗಳ ಬಳಿಕ 85 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದು ಸದ್ಯ ಅವರ ನಿವ್ವಳ ಮೌಲ್ಯ 33 ಶತಕೋಟಿ ಡಾಲರ್‌ಗೆ ಕುಸಿದಿದೆ.

ಅದಾಗ್ಯೂ ಬ್ಲೂಮ್ ಬರ್ಗ್ ಬಿಲಿನೆಯರ್ಸ್ ಸೂಚ್ಯಂಕ (Bloomberg BillionairesIndex) ಪಟ್ಟಿಯಲ್ಲಿ ಗೌತಮ್ ಅದಾನಿ 30ನೇ ಸ್ಥಾನದಲ್ಲಿದ್ದಾರೆ. ಅವರು 40 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ಅದು ವರದಿ ಮಾಡಿದೆ. ಹಿಂಡೆನ್‌ಬರ್ಗ್ ವರದಿ ಬಳಿಕ ಅದಾನಿ 150 ಶತಕೋಟಿ ಡಾಲರ್ ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ.

84.3 ಶತಕೋಟಿ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಮುಕೇಶ್ ಅಂಬಾನಿ (Mukesh Ambani) ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್,

About Author

Leave a Reply

Your email address will not be published. Required fields are marked *

You may have missed