ಮೇ 10 ರಂದು ವಿಧಾನಸಭಾ ಚುನಾವಣೆ: Garments ನೌಕರರಿಗೆ ಸಂಬಳ ಸಹಿತ ರಜೆ ಘೋಷಣೆ

0

ಬೆಂಗಳೂರು: ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆ ಅಂದು ಬೆಂಗಳೂರಿನ ಗಾರ್ಮೆಂಟ್ಸ್​​ ನೌಕರರಿಗೆ ಸಂಬಳ ಸಹಿತ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ.50ಕ್ಕಿಂತಲೂ ಕಡಿಮೆ ಆಗುತ್ತೆ. ಹೀಗಾಗೇ ಇದನ್ನ ತಪ್ಪಿಸಲು ವಾರದ ಮಧ್ಯೆ ಮತದಾನದ ದಿನಾಂಕ ಪ್ರಕಟಿಸಿದ್ದಾರೆ.

ಆದ್ರೆ, ಗಾರ್ಮೆಂಟ್ಸ್​ ಸಿಬ್ಬಂದಿ ಮತ್ತು ಕಾರ್ಮಿಕರು ಮತದಾನಕ್ಕೆ ಗೈರಾಗುವ ಆತಂಕ ಎದುರಾಗಿದೆ. ಹೀಗಾಗಿ, ಈ ಬಾರಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಪ್ರತಿ ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್​​​ಗೆ ಭೇಟಿ ನೀಡಿ ವೋಟ್ ಮಾಡಲು ಮನವಿ ಮಾಡ್ತಿದ್ದಾರೆ.

ಈ ವೇಳೆ ಗಾರ್ಮೆಂಟ್ಸ್​​ ಸಿಬ್ಬಂದಿ ಮತಹಾಕಲು ಊರಿಗೆ ಹೋದ್ರೆ, ಸಂಬಳ ಕಡಿತವಾಗುವ ಆತಂಕವನ್ನ ವ್ಯಕ್ತಿಪಡಿಸಿದ್ರು. ಇದ್ರಿಂದಾಗಿ ಗಾರ್ಮೆಂಟ್ಸ್ ಕಂಪನಿಗಳಿಗೆ ಸಂಬಳ ಸಹಿತ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ 3 ಲಕ್ಷ ಗಾರ್ಮೆಂಟ್ಸ್ ನೌಕರರಿದ್ದು, ಕಾರ್ಖಾನೆಗಳಲ್ಲಿ ದುಡಿಯುವ 1 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಇವ್ರೆಲ್ಲ ವೋಟ್ ಮಾಡಲು ಈಗ ಅವಕಾಶ ಸಿಕ್ಕಿದ್ದು, ಎಲೆಕ್ಷನ್​ಗೆ ರಜೆ ನೀಡಿದ್ರೆ, ವೋಟ್ ಮಾಡ್ದೆ ಇದ್ದವರಿಗೆ ಸಂಬಳ ನೀಡಲ್ವಂತೆ. ಸದ್ಯ ಕಾರ್ಮಿಕ ಇಲಾಖೆ ಕೂಡಾ ಎಲ್ಲಾ ಕಂಪನಿಗಳಿಗೂ ಸೂಚನೆ ನೀಡಿದ್ದು. ವೋಟ್ ಮಾಡಲು ಹೋಗುವ ನೌಕರರಿಗೆ ಸಂಬಳ ಸಹಿತ ರಜೆ ನೀಡಲು ಸೂಚನೆ ನೀಡಿದೆ.

About Author

Leave a Reply

Your email address will not be published. Required fields are marked *

You may have missed