ರ‍್ಯಾಪಿಡೋ ಬೈಕ್ ಗೆ ಕಾಯುತ್ತಿದ್ದ ಟೆಕ್ಕಿ ಮೇಲೆ ಆಟೋ ಹರಿಸಲು ಯತ್ನ..!

0

ಬೆಂಗಳೂರು: ರ‍್ಯಾಪಿಡೋ (Rapido)ಬುಕ್​ ಮಾಡ್ತೀನಿ ಎಂದಿದ್ದಕ್ಕೆ ಆಟೋ ಡ್ರೈವರ್​ ಕಿರಿಕ್​​ ತೆಗೆದು, ಟೆಕ್ಕಿ ಮೇಲೆ ಆಟೋ ಹರಿಸಲು ಯತ್ನಿಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೆಚ್‌ಎಸ್‌ಆರ್ ಲೇಔಟ್ ಸೆಕ್ಟರ್ 1ರಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದೆ.ಟೆಕ್ಕಿಗೆ ಆಟೊ ಚಾಲಕ ಒನ್ ಟು ತ್ರಿಬ್ಬಲ್ ರೇಟ್ ಹೇಳಿದ್ದನು,

ಅದಕ್ಕೆ ಟೆಕ್ಕಿ ಬೇಡ ರ್ಯಾಪಿಡೋ ಬೈಕ್ ಬುಕ್ ಮಾಡಿ ಹೋಗ್ತಿನಿ ಎಂದಿದ್ಧಾನೆ. ಇದರಿಂದ ಕೋಪಗೊಂಡು ಆಟೋ ಗುದ್ದಿ ಎಸ್ಕೇಪ್ ಆಗಿದ್ದಾನೆ. ಆಟೋ ಡಿಕ್ಕಿ ರಭಸಕ್ಕೆ ಟೆಕ್ಕಿ ರಸ್ತೆ ಬದಿಗೆ ಬಿದ್ದಿದ್ದಾನೆ. ಆಟೋ ಚಾಲಕನ ದುರ್ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟೆಕ್ಕಿಯು ಈ ಘಟನೆ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ದೂರು ನೀಡಿದ್ಧಾರೆ. ಸದ್ಯ ಪೊಲೀಸರು ಆಟೊ ಚಾಲಕನಿಗೆ ಹುಡುಕಾಟ ನಡೆಸುತ್ತಿದ್ದಾರೆ. HSR ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

About Author

Leave a Reply

Your email address will not be published. Required fields are marked *

You may have missed