ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ಆಸ್ತಿ ಕಬಳಿಸಲು ಯತ್ನ: ಆರೋಪಿಗಳ ಮೇಲೆ FIR

0

ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಸಲು ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಹಲಸೂರು ಪೊಲೀಸ್​ ಠಾಣೆಯಲ್ಲಿ ಖಾಸಗಿ ಕಂಪನಿ ಮಾಲೀಕರು ಹಾಗೂ ಅವರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದೆ. ಫಾರೂಕ್ ಸುಲೆಮಾನ್ ಎಂಬುವರು ನೀಡಿದ‌ ದೂರಿನ ಮೇರೆಗೆ ಕೆ.ಕೆ.

ಮೊಟ್ವಾನಿ ಕಂಪನಿ ಹಾಗೂ ಪುತ್ರ ದೀಪಕ್ ಕೆ. ಮೊಟ್ಬಾನಿ ವಿರುದ್ಧ ವಂಚನೆ, ಒಳಸಂಚು ಅರೋಪದಡಿ ಎಫ್‌ಐಆರ್ ದಾಖಲಾಗಿದೆ. ನಗರದ ಪ್ರತಿಷ್ಠಿತ ಪ್ರದೇಶವಾಗಿರುವ ಬಿಗ್ರೇಡ್ ರೋಡ್ ನಲ್ಲಿರುವ 36500 ಚದರ್​ ಅಡಿ ಜಾಗವಿರುವ ವಾಣಿಜ್ಯ ಸಂಕೀರ್ಣ ಜಾಗವನ್ನು ತಮ್ಮದೆಂದು ಸುಳ್ಳು ದಾಖಲಾತಿ ಸೃಷ್ಟಿಸಿ ದೊಮ್ಮಲೂರಿನಲ್ಲಿರುವ ರಿಜಿಸ್ಟಾರ್ ಕಚೇರಿಯಲ್ಲಿ ಫಾರೂಕ್ ಸುಲೆಮಾನ್ ಅವರ ಕುಟುಂಬ ಒಡೆತನದಲ್ಲಿರುವ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ‌.

ದೂರುದಾರ ತಂದೆ ಸುಲೇಮಾನ್ ಹಜಿ‌ ಇಬ್ರಾಹಿಂ ಅವರ ಹೆಸರಿನಲ್ಲಿದ್ದ ಜಾಗವನ್ನ ಉತ್ತರಾಧಿಕಾರಿಯಾಗಿದ್ದ ಫಾರೂಕ್ ಸುಲೇಮಾನ್ 1987 ರಂದು ಮೊಟ್ವಾನಿ ಅವರೊಂದಿಗೆ ಕಟ್ಟಡ ನಿರ್ಮಾಣದ ಒಪ್ಪಂದ ಮಾಡಿಕೊಂಡಿದ್ದರು. 2012ರಲ್ಲಿ ಜಿಪಿಎ‌ ನೀಡಲಾಗಿದ್ದು‌ ಮಾರಾಟಕ್ಕೆ ಅಸಲಿ ಮಾಲೀಕರು ಅನುಮತಿ ನೀಡಿರಲಿಲ್ಲ.‌ ಮಾಲ್‌ ನಿರ್ಮಾಣದ ದೂರುದಾರರಿಗೆ ಪ್ರಮಾಣಪತ್ರ ಕೊಡಲಾಗಿತ್ತು. ಕೆಲ ವರ್ಷಗಳ ಬಾಡಿಗೆ ನೀಡಿ ಅನಂತರ ಮಾಲ್‌ನ ಮೂಲಸೌಕರ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿತ್ತು. ಈ ಬಗ್ಗೆ ಮಧ್ಯ ಪ್ರವೇಶಿಸಿದ ದೂರುದಾರರ ಕುಟುಂಬ ಪರಿಶೀಲಿಸಿದಾಗ ಪ್ರಕರಣದ‌ ಆರೋಪಿಯು ನಕಲಿ ದಾಖಲಾತಿ ಸೃಷ್ಟಿಸಿ ಗಿಫ್ಟ್ ಡೀಡ್ ರಚಿಸಿಕೊಂಡಿರುವುದು ಕಂಡುಬಂದಿದೆ. ಫವರ್ ಅಫ್ ಆರ್ಟಾನಿ ಅಧಿಕಾರ ನೀಡದಿದ್ದರೂ‌ ಸುಳ್ಳು ದಾಖಲೆ‌ ರಚಿಸಿ ದೂರುದಾರರಿಗೆ ತಿಳಿಸದೆ‌ ಮೋಸ ಮಾಡುವ ಉದ್ದೇಶದಿಂದ ಕೃತ್ಯವೆಸಗಿರುವ ಆರೋಪ‌ ಕೇಳಿಬಂದಿದೆ.‌

About Author

Leave a Reply

Your email address will not be published. Required fields are marked *

You may have missed